ಸೋಮವಾರಪೇಟೆ, ನ. ೧೯: ಸಮಾಜ ಸೇವೆಯಲ್ಲಿ ರೋಟರಿ ಸಂಸ್ಥೆಯು ಇಂದಿಗೂ ಮುಂಚೂಣಿ ಯಲ್ಲಿದ್ದು, ಪ್ರಾಮಾಣಿಕವಾಗಿ ಸೇವೆ ಸಲ್ಲಿಸುವ ಸಂಕಲ್ಪ ಹೊಂದಿದ್ದರೆ ರೋಟರಿ ಉತ್ತಮ ವೇದಿಕೆಯಾಗಿದೆ. ಇಂತಹ ಸೇವಾಸಕ್ತರಿಗೆ ರೋಟರಿ ಸದಸ್ಯತನವನ್ನು ನೀಡಲಾಗುವುದು ಎಂದು ಸಂಸ್ಥೆಯ ಜಿಲ್ಲಾ ರಾಜ್ಯಪಾಲ ಎ.ಆರ್. ರವೀಂದ್ರ ಭಟ್ ತಿಳಿಸಿದರು.
ಸೋಮವಾರಪೇಟೆ ರೋಟರಿ ಹಿಲ್ಸ್ ಸಂಸ್ಥೆಯು ತಾಲೂಕಿನ ವಿವಿಧೆಡೆ ಆಯೋಜಿಸಿದ್ದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ನಂತರ, ಇಲ್ಲಿನ ಗೌಡ ಸಮಾಜದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸುಮಾರು ೧೧೬ ವರ್ಷಗಳ ಇತಿಹಾಸವಿರುವ ರೋಟರಿ ಸಂಸ್ಥೆಯು ಸಮಾಜಕ್ಕೆ, ಜನ ಸಾಮಾನ್ಯರು ಹಾಗೂ ವಿದ್ಯಾರ್ಥಿ ಗಳಿಗೆ ಉಪಯೋಗವಾಗುವ ಕಾರ್ಯಕ್ರಮಗಳನ್ನು ಮಾಡುವ ಮೂಲಕವೇ ಜನಮನ್ನಣೆ ಗಳಿಸಿದೆ. ಪೋಲಿಯೋ ನಿರ್ಮೂಲನೆಯಲ್ಲಿ ವಿಶ್ವ ಮನ್ನಣೆಗಳಿಸಿದೆ ಎಂದರು.
ಪ್ರಾಕೃತಿಕ ವಿಕೋಪದಂತಹ ಘಟನೆಗಳು ಸಂಭವಿಸಿದಾಗ ರೋಟರಿ ಸದಸ್ಯರು ಸೈನಿಕರಂತೆ ಕೆಲಸ ಮಾಡಿದ್ದಾರೆ. ವಿದ್ಯಾಸೇತು ಯೋಜನೆಯಲ್ಲಿ ಸರಕಾರಿ ಪ್ರೌಢಶಾಲೆಯ ಕನ್ನಡ ಮಾಧ್ಯಮದ ಸಂಸ್ಥೆಯು ಸಮಾಜಕ್ಕೆ, ಜನ ಸಾಮಾನ್ಯರು ಹಾಗೂ ವಿದ್ಯಾರ್ಥಿ ಗಳಿಗೆ ಉಪಯೋಗವಾಗುವ ಕಾರ್ಯಕ್ರಮಗಳನ್ನು ಮಾಡುವ ಮೂಲಕವೇ ಜನಮನ್ನಣೆ ಗಳಿಸಿದೆ. ಪೋಲಿಯೋ ನಿರ್ಮೂಲನೆಯಲ್ಲಿ ವಿಶ್ವ ಮನ್ನಣೆಗಳಿಸಿದೆ ಎಂದರು.

ಪ್ರಾಕೃತಿಕ ವಿಕೋಪದಂತಹ ಘಟನೆಗಳು ಸಂಭವಿಸಿದಾಗ ರೋಟರಿ ಸದಸ್ಯರು ಸೈನಿಕರಂತೆ ಕೆಲಸ ಮಾಡಿದ್ದಾರೆ. ವಿದ್ಯಾಸೇತು ಯೋಜನೆಯಲ್ಲಿ ಸರಕಾರಿ ಪ್ರೌಢಶಾಲೆಯ ಕನ್ನಡ ಮಾಧ್ಯಮದ ಪರಿಸರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರಸಕ್ತ ಸಾಲಿನಲ್ಲಿ ಬಿದಿರು ಬಿತ್ತನೆ ಮಾಡುವ ಉದ್ದೇಶದಿಂದ ೮ ಕೋಟಿ ೪ ಲಕ್ಷ ಬಿದಿರು ಬೀಜವನ್ನು ಬಿತ್ತನೆ ಮಾಡಲಾಗಿದೆ. ರುದ್ರಭೂಮಿ ಕಾಯಕಲ್ಪ ಯೋಜನೆಯಲ್ಲಿ ಶವಸಂಸ್ಕಾರಕ್ಕೆ ರೋಟರಿ ಜಿಲ್ಲೆಯಲ್ಲಿ ೭೫ ಸಿಲಿಕಾನ್ ಚೇಂಬರ್ ಅಳವಡಿ ಸುವ ಉದ್ದೇಶ ಹೊಂದಲಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದೊಂದಿಗೆ ತಾಲೂಕಿನ ನಾಕೂರು, ಕೂತಿ, ಬಜೆಗುಂಡಿ ಗ್ರಾಮಗಳಲ್ಲಿ ಚೇಂಬರ್ ಅಳವಡಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಸಹಾಯಕ ರಾಜ್ಯಪಾಲ ಎಚ್.ಟಿ. ಅನಿಲ್, ರೋಟರಿ ಅಧ್ಯಕ್ಷ ಎಂ.ಎA. ಪ್ರಕಾಶ್‌ಕುಮಾರ್, ಕಾರ್ಯದರ್ಶಿ ಡಿ.ಪಿ. ಧರ್ಮಪ್ಪ ಉಪಸ್ಥಿತರಿದ್ದರು.