ಮಡಿಕೇರಿ, ನ.೧೭: ೨೦೨೨ರ ಜನವರಿ ೧ ನ್ನು ಅರ್ಹತಾ ದಿನಾಂಕವಾಗಿಟ್ಟುಕೊAಡು ನಡೆಸುವ ಭಾವಚಿತ್ರವಿರುವ ಮತದಾರರ ಪಟ್ಟಿಯ ಪರಿಷ್ಕರಣೆ ಸಂಬAಧ ಈಗಾಗಲೇ ಕರಡು ಮತದಾರರ ಪಟ್ಟಿ ಪ್ರಕಟಗೊಂಡಿದ್ದು, ಜಿಲ್ಲಾ ಕೇಂದ್ರ, ತಾಲೂಕು ಕೇಂದ್ರ ಹಾಗೂ ಸಂಬAಧಪಟ್ಟ ಬಿಎಲ್‌ಒಗಳ ಮುಖಾಂತರ ಮತದಾರರು ಮತ್ತು ೧೮ ವರ್ಷ ಮೇಲ್ಪಟ್ಟವರು ನಮೂನೆ ೬, ೭, ೮, ೮ಎ ಅರ್ಜಿಗಳನ್ನು ಪಡೆದು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಅಥವಾ ವಜಾಗೊಳಿಸಲು ಮತ್ತು ತಿದ್ದುಪಡಿ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕಾರ್ಯವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವ ಅವಶ್ಯಕತೆ ಇರುವುದರಿಂದ ನಗರಸಭಾ ವ್ಯಾಪ್ತಿಯಲಿ ಸಾರ್ವಜನಿಕರಿಗೆ ಈಗಾಗಲೇ ಪ್ರಕಟಗೊಂಡಿರುವ ಕರಡು ಮತದಾರರ ಪಟ್ಟಿಯಲ್ಲಿ ಹೆಸರುಗಳನ್ನು ಪರಿಶೀಲಿಸಿ ಬದಲಾವಣೆ, ಸೇರ್ಪಡೆ, ತಿದ್ದುಪಡಿ ಇದ್ದಲ್ಲಿ ಡಿಸೆಂಬರ್ ೪ ರೊಳಗೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುವAತೆ ನಗರಸಭೆ ಪೌರಾಯುಕ್ತ ರಾಮದಾಸ್ ತಿಳಿಸಿದ್ದಾರೆ.