ಸೋಮವಾರಪೇಟೆ,ನ.೧೭: ಪ್ರತಿಷ್ಠಿತ ಕರ್ನಾಟಕ ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿ ರಚನೆ ಸಂಬAಧ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆ ಸೋಮವಾರಪೇಟೆಯ ಹೆಚ್.ಎನ್. ರವೀಂದ್ರ ಅವರು ನಾಮಪತ್ರ ಸಲ್ಲಿಸಿದ್ದಾರೆ.
ಮಡಿಕೇರಿಯ ಬಾಲಭವನ ಕಟ್ಟಡದಲ್ಲಿರುವ ಸಹಕಾರ ಸಂಘಗಳ ಉಪ ನಿಬಂಧಕರ ಕಚೇರಿಯಲ್ಲಿ ತೆರೆಯಲಾಗಿರುವ ಚುನಾವಣಾ ಶಾಖೆಗೆ ತಮ್ಮ ನೂರಾರು ಬೆಂಬಲಿಗರೊAದಿಗೆ ತೆರಳಿದ ರವೀಂದ್ರ ಅವರು, ಕೊಡಗು ಜಿಲ್ಲಾ ನಿರ್ದೇಶಕ ಸ್ಥಾನದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
ನಾಮಪತ್ರವನ್ನು ಜಿಲ್ಲಾ ಕ್ಷೇತ್ರ ಚುನಾವಣಾಧಿಕಾರಿಗಳೂ ಆಗಿರುವ ಸಹಕಾರ ಸಂಘಗಳ ಉಪ ನಿಬಂಧಕ ಬಿ.ಕೆ. ಸಲೀಂ ಅವರು ಸ್ವೀಕರಿಸಿದರು.
ನಂತರ ಮಾತನಾಡಿದ ರವೀಂದ್ರ ಅವರು, ಒಕ್ಕಲಿಗ ಜನಾಂಗ ಬಾಂಧವರ ಆಶಯದಂತೆ ಈ ಬಾರಿ ನಾಮಪತ್ರ ಸಲ್ಲಿಸಿದ್ದು, ಜಿಲ್ಲೆಯಲ್ಲಿ ಜನಾಂಗದ ಶ್ರೇಯೋಭಿವೃದ್ಧಿಗೆ ಶ್ರಮಿಸಲಾಗುವುದು. ಜನಾಂಗದ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ನೂತನ ಯೋಜನೆಗಳನ್ನು ಜಾರಿಗೊಳಿಸ ಲಾಗುವುದು. ಇದರೊಂದಿಗೆ ಸಮುದಾಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.
ಈಗಾಗಲೇ ಸಂಘದ ಸದಸ್ಯ ಮತದಾರರನ್ನು ಭೇಟಿಯಾಗಿ ಸಭೆ ನಡೆಸಲಾಗಿದ್ದು, ಜನಾಂಗ ಬಾಂಧವರ ಬೇಡಿಕೆಗಳ ಮಾಹಿತಿ ಪಡೆದಿದ್ದೇನೆ. ಗ್ರಾಮೀಣ ಪ್ರದೇಶದಲ್ಲಿ ಬದುಕು ಕಟ್ಟಿಕೊಂಡಿರುವ ಒಕ್ಕಲಿಗ ಸಮುದಾಯಕ್ಕೆ ಸಂಘದ ವತಿಯಿಂದ ಲಭಿಸುವ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಲಾಗುವುದು. ದೂರದ ಊರುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಜನಾಂಗದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹ ನೀಡಲಾಗುವುದು ಎಂದರು.
ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ ಮಾತನಾಡಿ, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ರವೀಂದ್ರ ಅವರನ್ನು ಈ ಬಾರಿ ಒಕ್ಕಲಿಗರ ಸಂಘಕ್ಕೆ ಅವಿರೋಧವಾಗಿ ಆಯ್ಕೆ ಮಾಡಬೇಕಿದೆ. ಕಳೆದ ೨೦ ವರ್ಷಗಳಿಂದಲೂ ಬಡ ವಿದ್ಯಾರ್ಥಿಗಳಿಗೆ ವರ್ಷಂಪ್ರತಿ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಉಚಿತವಾಗಿ ಪುಸ್ತಕಗಳನ್ನು ವಿತರಿಸಿದ್ದಾರೆ. ಬಡ ಕುಟುಂಬಗಳಿಗೆ ನೆರವಾಗುವ ದೃಷ್ಟಿಯಿಂದ ಉಚಿತ ಸಾಮೂಹಿಕ ವಿವಾಹ ನೆರವೇರಿಸಿದ್ದಾರೆ. ಸೋಮವಾರಪೇಟೆಯ ಆನೆಕೆರೆ ಮತ್ತು ಯಡೂರು ಕೆರೆಯನ್ನು ಹೂಳೆತ್ತಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಇವರ ಆಯ್ಕೆಯಿಂದ ಸಮುದಾಯಕ್ಕೆ ಇನ್ನಷ್ಟು ಪ್ರಯೋಜನವಾಗಲಿದೆ ಎಂದರು.
ಈ ಸಂದರ್ಭ ಸಮುದಾಯದ ಪ್ರಮುಖರಾದ ಸಂಜಯ್ ಜೀವಿಜಯ, ಸೂರ್ತಲೆ ಸೋಮಣ್ಣ, ಕೊಲ್ಯದ ಗಿರೀಶ್, ಲೋಕೇಶ್ವರಿ ಗೋಪಾಲ್, ನಂದಕುಮಾರ್, ಹೂವಯ್ಯ, ಜಲಾ ಹೂವಯ್ಯ, ಮಂಜೂರು ತಮ್ಮಣ್ಣಿ, ಗಿರೀಶ್ ಮಲ್ಲಪ್ಪ, ಕೊತ್ನಳ್ಳಿ ಅರುಣ್, ಬಿ.ಜೆ. ದೀಪಕ್, ಗೌಡಳ್ಳಿ ಪ್ರಸಿ, ಬಿ.ಎ. ಧರ್ಮಪ್ಪ ಸೇರಿದಂತೆ ನೂರಾರು ಮಂದಿ ಬೆಂಬಲಿಗರು ಉಪಸ್ಥಿತರಿದ್ದರು.
ಡಿ.೧೨ಕ್ಕೆ ಚುನಾವಣೆ: ಸಂಘದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುವ ಅಭ್ಯರ್ಥಿಗಳು ತಾ. ೧೫ರಿಂದ ೨೩ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದ್ದು, ತಾ. ೨೪ರಂದು ನಾಮಪತ್ರ ಪರಿಶೀಲನೆ, ೨೫ರ ಮಧ್ಯಾಹ್ನ ೩ ಗಂಟೆಯವರೆಗೆ ನಾಮಪತ್ರ ವಾಪಸ್ ಪಡೆಯಲು ಅವಕಾಶ, ತಾ. ೨೭ರಂದು ಅಭ್ಯರ್ಥಿಗಳಿಗೆ ಚಿಹ್ನೆ ನಿಗದಿ, ಡಿ.೧೨ರಂದು ಬೆಳಿಗ್ಗೆ ೭ ಗಂಟೆಯಿAದ ಸಂಜೆ ೫ ಗಂಟೆಯವರೆಗೆ ಮತದಾನ, ಡಿ.೧೫ರಂದು ಮತ ಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶ ಹೊರಬೀಳುವ ನಿರೀಕ್ಷೆಯಿದೆ.