ಮಡಿಕೇರಿ, ನ. ೧೭: ಕೋವಿಡ್-೧೯ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಭಾರತ ಸರ್ಕಾರದ ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಸಚಿವಾಲಯದ ವತಿಯಿಂದ ಪ್ರಧಾನಮಂತ್ರಿ ಕೌಶಲ್ಯ ವಿಕಾಸ ಯೋಜನೆ-೩.೦ ರಡಿಯಲ್ಲಿ ಆರೋಗ್ಯ ಸೇವೆಯಲ್ಲಿ ಆಸಕ್ತಿ ಹೊಂದಿರುವವರಿಗಾಗಿ ೪ ತಿಂಗಳ ಅವಧಿಯವರೆಗೆ ವಿವಿಧ ಕೌಶಲ್ಯ ತರಬೇತಿ ಆಯೋಜಿಸಲಾಗಿದೆ.

ಎಮರ್ಜೆನ್ಸಿ ಮೆಡಿಕಲ್ ಟೆಕ್ನೀಷಿಯನ್-ಬೇಸಿಕ್, ದ್ವಿತೀಯ ಪಿ.ಯು.ಸಿ. (ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು). ಜನರಲ್ ಡ್ಯೂಟಿ ಅಸಿಸ್ಟೆಂಟ್ (ಜಿಡಿಎ) ಎಸ್.ಎಸ್.ಎಲ್.ಸಿ ಹೀಗೆ ವಿವಿಧ ತರಬೇತಿಯನ್ನು ನೀಡಲಾಗುತ್ತದೆ.

ತರಬೇತಿ ಪಡೆಯಲು ಆಸಕ್ತಿಯಿರುವ ಅರ್ಹ ಅಭ್ಯರ್ಥಿಗಳು ತಮ್ಮ ಸ್ವ-ವಿವರಗಳನ್ನು ತಾ. ೨೦ ರೊಳಗೆ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಯವರ ಕಚೇರಿ ದೂ.ಸಂ.೦೮೨೭೨-೨೨೫೮೫೧ ಹಾಗೂ hಣಣಠಿs://ಜಿoಡಿms.gಟe/ಜಠಿPಠಿಡಿqo೬ಏಒಖಆಓರಿಜe೭ ಗೂಗಲ್ ಲಿಂಕ್ ಮೂಲಕ ನೋಂದಣಿ ಮಾಡಿಕೊಳ್ಳಬಹುದಾಗಿದೆ.

ಹೆಚ್ಚಿನ ಮಾಹಿತಿಗೆ ದೂ.ಸಂ. ೯೭೪೧೫೫೬೦೩೬, ೭೨೦೪೮೫೩೮೭೬ ಅಥವಾ ೯೬೧೧೨೯೬೭೨೮ ಹಾಗೂ ಇ-ಮೇಲ್ ವಿಳಾಸ: ಜsಜoಞoಜಚಿgu೨೦೨೦ @gmಚಿiಟ.ಛಿom ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಸಿ.ಎಂ. ಉಮಾ ತಿಳಿಸಿದ್ದಾರೆ.