ಮಡಿಕೇರಿ, ನ. ೧೮: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯ ಕನ್ನಡ ಜಾಗೃತಿ ಸಮಿತಿ ವತಿಯಿಂದ ಅನೇಕ ಕನ್ನಡ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆ ದಿಸೆಯಲ್ಲಿ ತಾ. ೧ ರಿಂದ ೩೦ ರವರೆಗೆ ಕಾಯಕ ವರ್ಷವೆಂದು ಆಚರಿಸಲಾಗುತ್ತಿದೆ. ಮಡಿಕೇರಿ ತಾಲೂಕಿನ ವಿದ್ಯಾರ್ಥಿಗಳಿಗೆ ತಾ. ೨೩ ರಂದು ಬೆಳಿಗ್ಗೆ ೧೦ ಗಂಟೆಗೆ ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ಕನ್ನಡ ಜಾಗೃತಿ ವಿವಿಧ ಸ್ಪರ್ಧೆ ಏರ್ಪಡಿಸಲಾಗಿದೆ.
ಈ ಸ್ಪರ್ಧೆಯಲ್ಲಿ ಸರ್ಕಾರಿ ಅನುದಾನ ಸಹಿತ, ಅನುದಾನ ರಹಿತ, ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಬಹುದು. ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಮಕ್ಕಳನ್ನು ಸ್ಪರ್ಧೆಗೆ ಕರೆತರಬೇಕು ಎಂದು ಕನ್ನಡ ಜಾಗೃತಿ ಸಮಿತಿಯ ಸದಸ್ಯರಾದ ಭಾರತಿ ರಮೇಶ್ ಅವರು ಮನವಿ ಮಾಡಿದ್ದಾರೆ.
ಸ್ಪರ್ಧೆಯ ವಿವರ: ಒಬ್ಬ ವಿದ್ಯಾರ್ಥಿಗೆ ಒಂದು ಸ್ಪರ್ಧೆಯಲ್ಲಿ ಮಾತ್ರ ಭಾಗವಹಿಸಲು ಅವಕಾಶ. ೧ ರಿಂದ ೪ನೇ ತರಗತಿ, ೫ ರಿಂದ ೭ನೇ ತರಗತಿ ವಿದ್ಯಾರ್ಥಿಗಳಿಗೆ ನಾಡು ನುಡಿಗೆ ಸಂಬAಧಪಟ್ಟAತೆ ಕನ್ನಡ ಸಮೂಹ ಗಾಯನ (ಕಡ್ಡಾಯವಾಗಿ ೪ ಜನರ ತಂಡ), ೮ ರಿಂದ ೧೦ನೇ ತರಗತಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ (ಒಂದು ಶಾಲೆಯಿಂದ ೨ ವಿದ್ಯಾರ್ಥಿಗಳು ಮಾತ್ರ), ಜನಪದ ಗೀತೆ ಸಮೂಹ ಗಾಯನ (ಕಡ್ಡಾಯವಾಗಿ ೪ ಜನರ ತಂಡ). ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ (ಒಂದು ಕಾಲೇಜಿನಿಂದ ಒಬ್ಬರಿಗೆ ಅವಕಾಶ) ವಿಷಯ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್ ಅವರ ಪರಿಚಯ ಹಾಗೂ ಅವರ ಕೃತಿ ಯಾಯಾತಿಯ ಬಗ್ಗೆ ವಿಮರ್ಶೆ, ಕೊಡಗಿನ ಜನಪದ ಕಲೆ ಉಮ್ಮತಾಟ್ (ಕಡ್ಡಾಯವಾಗಿ ೮ ಜನರ ತಂಡ) ಈ ಸ್ಪರ್ಧೆಗಳು ನಡೆಯಲಿದೆ ಎಂದು ಕನ್ನಡ ಜಾಗೃತಿ ಸಮಿತಿಯ ಸದಸ್ಯರಾದ ಭಾರತಿ ರಮೇಶ್ ಅವರು ತಿಳಿಸಿದ್ದಾರೆ.