ಕೂಡಿಗೆ, ನ. ೧೮: ಲೋಕೋಪಯೋಗಿ ಇಲಾಖೆಯ ವತಿಯಿಂದ ಈಗಾಗಲೇ ಭೂಮಿಪೂಜೆ ನೆರವೇರಿಸಿ ರೂ. ೫ ಕೋಟಿ ವೆಚ್ಚದ ಕಾಮಗಾರಿ ಪ್ರಾರಂಭವಾಗಿದೆ. ಹಾಸನ-ಕುಶಾಲನಗರ ಹೆದ್ದಾರಿಯ ಹೆಬ್ಬಾಲೆ ಮತ್ತು ಕಣಿವೆಯ ಮಧ್ಯ ಭಾಗದವರೆಗಿನ ತಿರುವುಗಳಲ್ಲಿ ರಸ್ತೆಯ ಅಗಲೀಕರಣ ಮತ್ತು ರಸ್ತೆಯ ಮಧ್ಯ ಭಾಗಕ್ಕೆ ವಿಭಜಕ ಅಳವಡಿಕೆ ಕಾರ್ಯ ಮತ್ತು ಹೆಬ್ಬಾಲೆ ಗ್ರಾಮದಿಂದ ಹನುಮಂತಪುರದ ಕಡೆಗೆ ಹೋಗುವ ಕಾಂಕ್ರಿಟ್ ರಸ್ತೆಯ ಕಾಮಗಾರಿ ಆರಂಭಗೊAಡಿದೆ.