ಮಡಿಕೇರಿ, ನ. ೧೮: ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ಮಡಿಕೇರಿ, ಕೊಡಗು ವತಿಯಿಂದ ಶತಮಾನೋತ್ಸವ -೨೦೨೧ರ ಅಂಗವಾಗಿ ಜಿಲ್ಲಾಮಟ್ಟದ ಮುಕ್ತ ಜಾನಪದ ಸಂಗೀತ ಗಾಯನ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.
ಕರೋಕೆ ಸಹಿತ/ರಹಿತ ಜಾನಪದ ಹಾಡು (ಚಲನಚಿತ್ರದಲ್ಲಿ ಬಳಸಲಾದ ಜಾನಪದ ಹಾಡನ್ನೂ ಹಾಡಬಹುದು). ೧೮ ವರ್ಷದಿಂದ ಮೇಲಿನವರನ್ನು ಒಂದು ವಿಭಾಗ ಹಾಗೂ ೧೦ ರಿಂದ ೧೮ ವರ್ಷದವರೆಗಿನವರನ್ನು ಮತ್ತೊಂದು ವಿಭಾಗವಾಗಿ ವಿಂಗಡಿಸಲಾಗಿದೆ.
ತಾ. ೨೧ ರ ಮಧ್ಯಾಹ್ನ ೧೨ ಗಂಟೆಯೊಳಗೆ ಭಾಗವಹಿಸುವವರು ಹೆಸರು ನೋಂದಾಯಿಸಿಕೊಳ್ಳಬೇಕಿದೆ. ಗಾಯನ ಸ್ಪರ್ಧೆ ಮಡಿಕೇರಿಯ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಶತಮಾನ ಭವನದಲ್ಲಿ ತಾ. ೨೨ ರಂದು ಸಂಜೆ ೪ ಗಂಟೆಗೆ ಪ್ರಾರಂಭವಾಗಲಿದೆ. ನಿಮ್ಮ ಹೆಸರನ್ನು ಮೊ. ೯೪೪೯೯೫೧೯೯೩, ೯೪೪೮೩೮೨೬೧೨ ಸಂಪರ್ಕಿಸಿ ನೋಂದಾಯಿಸಿಕೊಳ್ಳಬಹುದು.