ಮಡಿಕೇರಿ, ನ. ೧೭: ಶೀರ್ಷಿಕೆ ನೋಡಿ ಪಟ್ಟಣದ ನಡುವೆ ಇದು ಯಾವ ಅರಣ್ಯ ಎಂದು ಹುಬ್ಬೇರಿಸಬೇಡಿ... ಇದೊಂದು ಸರಕಾರಿ ಜಾಗದ ನಿರ್ಲಕ್ಷö್ಯದಿಂದ ಉಂಟಾಗಿರುವ ಸಮಸ್ಯೆ. ಅಮ್ಮತ್ತಿಯ ಕಂದಾಯ ಕಚೇರಿ, ಪಶುವೈದ್ಯ ಆಸ್ಪತ್ರೆ ಇರುವ ಸ್ಥಳದ ಆವರಣದಲ್ಲಿ ಕಂದಾಯ ಇಲಾಖೆಯ ಪರಿವೀಕ್ಷಕರ ವಸತಿಗೃಹವೊಂದಿತ್ತು. ಇದು ಬಳಸಲ್ಪಡುತ್ತಿದ್ದುದು ಸುಮಾರು ೩೦ ವರ್ಷಗಳ ಹಿಂದೆ ತದನಂತರ ಈ ಕಟ್ಟಡ ಪಾಳುಬಿದ್ದಿದೆ. ಇದರಿಂದಾಗಿ ಕಟ್ಟಡದ ಸುತ್ತಮುತ್ತಲೆಲ್ಲ ಕಾಡು ಬೆಳೆಯುತ್ತಿದ್ದು, ದಟ್ಟವಾಗಿ ಬೆಳೆಯುತ್ತಿರುವ ಕಾಡಿನಿಂದಾಗಿ ಕಟ್ಟಡವೇ ಕಾಣದಂತಾಗಿದೆ. ಸನಿಹದಲ್ಲೇ ಇಲಾಖೆಗೆ ಸೇರಿದ ಕಚೇರಿ ಹಾಗೂ ಪಶುವೈದ್ಯ ಆಸ್ಪತ್ರೆಯೂ ಇದೆ. ಹಲವಾರು ಜನರೂ ಆಗಮಿಸುತ್ತಿರುತ್ತಾರೆ. ಆದರೆ ಈ ಬಗ್ಗೆ ಸಂಬAಧಿಸಿದ ಇಲಾಖಾಧಿಕಾರಿಗಳು ಗಮನ ಹರಿಸಿದಂತಿಲ್ಲ.
ಪಟ್ಟಣದ ಹೃದಯ ಭಾಗದಲ್ಲೇ ಇರುವ ಈ ಸ್ಥಳವನ್ನು ಸರಿಪಡಿಸಿ ಸದ್ಭಳಕೆ ಮಾಡಬೇಕಿದೆ ಎಂದು ಸ್ಥಳೀಯರಾದ ಬೊಮ್ಮಂಡ ನಾಚಪ್ಪ ಅವರು ‘ಶಕ್ತಿ’ ಮೂಲಕ ಆಗ್ರಹಿಸಿದ್ದಾರೆ.