ಗುಡ್ಡೆಹೊಸೂರು, ನ. ೧೭: ಇಲ್ಲಿನ ಬೊಳ್ಳೂರು ಗ್ರಾಮದ ಶ್ರೀ ಚೌಡೇಶ್ವರಿ ಮತ್ತು ಶ್ರೀ ಬಸವೇಶ್ವರ ದೇವಸ್ಥಾನ ಸಮಿತಿ ವತಿಯಿಂದ ಸಾರ್ವಜನಿಕ ಹುತ್ತರಿ ಹಬ್ಬವನ್ನು ಆಚರಿಸಲಾಗುತ್ತಿದೆ.
ತಾ.೨೦ ರಂದು ಅಲ್ಲಿನ ನಿವಾಸಿ ಕೆ.ಎಂ. ಮುದ್ದಪ್ಪ ಅವರ ಗದ್ದೆಯಲ್ಲಿ ಕದಿರುತೆಗೆದು ರಾತ್ರಿ ೭.೩೦ ಗಂಟೆಗೆ ನೆರೆಕಟ್ಟುವುದು. ೮.೧೦ಕ್ಕೆ ಕದಿರು ತೆಗೆದು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಸಾಗಿ ಅಲ್ಲಿನ ಶ್ರೀಚೌಡೇಶ್ವರಿ ದೇವಸ್ಥಾನದಲ್ಲಿ ಪೂಜೆ ನಡೆಸಿ ನಂತರ ಕದಿರನ್ನು ಸಾರ್ವಜನಿಕರಿಗೆ ವಿತರಿಸಲಾಗುವುದು ಎಂದು ದೇವಸ್ಥಾನ ಸಮಿತಿಯ ಮಂಡೆಪAಡ ಸೋಮಯ್ಯ ಮತ್ತು ಬಿ.ಪಿ.ಗುರುಬಸಪ್ಪ ತಿಳಿಸಿದ್ದಾರೆ.