ಸೋಮವಾರಪೇಟೆ, ನ. ೧೭: ದತ್ತಪೀಠಕ್ಕೆ ಮಾಲಾಧಾರಿಗಳಾಗಿ ತೆರಳುತ್ತಿದ್ದ ಭಕ್ತಾದಿಗಳ ಮೇಲೆ ಕೋಲಾರದಲ್ಲಿ ಮತಾಂಧÀರು ಹಲ್ಲೆ ನಡೆಸಿರುವ ಕ್ರಮ ಖಂಡನೀಯ. ಘಟನೆಯ ಎಲ್ಲಾ ಆರೋಪಿಗಳನ್ನೂ ತಕ್ಷಣ ಬಂಧಿಸಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.
ದತ್ತಮಾಲಾಧಾರಿಗಳು ತೆರಳುತ್ತಿದ್ದ ಬಸ್ನ್ನು ಅಡ್ಡಗಟ್ಟಿದ ೧೦೦ಕ್ಕೂ ಅಧಿಕ ಮತಾಂಧರು, ಅವರುಗಳ ಮೇಲೆ ಹಲ್ಲೆ ನಡೆಸಿ ಮತ್ತೊಂದು ಗೋಧ್ರಾ ಮಾದರಿ ಗಲಭೆಗೆ ಪ್ರಯತ್ನಿಸಿದ್ದು, ಇದರ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪದಾಧಿಕಾರಿಗಳು ಆಗ್ರಹಿಸಿದರು.
ಇದರೊಂದಿಗೆ ಕಾಂಗ್ರೆಸ್ ಮುಖಂಡ ಸಲ್ಮಾನ್ ಖುರ್ಷಿದ್ ಅವರು ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಬರಹ ಪ್ರಕಟಿಸಿದ್ದು, ಧರ್ಮದ ತೇಜೋವಧೆ ಮಾಡಿದ್ದಾರೆ. ಇವರ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಪದಾಧಿಕಾರಿಗಳು ಒತ್ತಾಯಿಸಿದರು.
ಈ ಸಂಬAಧಿತ ಮನವಿಯನ್ನು ತಾಲೂಕು ತಹಶೀಲ್ದಾರ್ ಕಚೇರಿ ಮೂಲಕ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಯಿತು. ಈ ಸಂದರ್ಭ ಸಮಿತಿಯ ಈರಪ್ಪ, ರಮೇಶ್, ಪ್ರಶಾಂತ್, ಕೆಂಪಯ್ಯ, ಲಕ್ಷಿö್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.