ಮಡಿಕೇರಿ: ಮಡಿಕೇರಿ ಲಿಟ್ಲ್ ಫ್ಲವರ್ ವಿದ್ಯಾಸಂಸ್ಥೆಯಲ್ಲಿ ಮಕ್ಕಳ ದಿನಾಚರಣೆಯನ್ನು ಸಂಭ್ರಮದಿAದ ಆಚರಣೆ ಮಾಡಲಾಯಿತು.

ಕಾರ್ಯಕ್ರಮವನ್ನು ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ ಆಚರಣೆ ಮಾಡಲಾಯಿತು. ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಸಂಸ್ಥೆಯ ಮುಖ್ಯೋಪಾಧ್ಯಾಯಿನಿ ಸುನೀತ ಪ್ರೀತು ನೆರವೇರಿಸಿದರು.

ಕಾರ್ಯಕ್ರಮಕ್ಕೆ ಶಿಕ್ಷಕಿ ಮಂಜುಳ ಹಾಗೂ ನಿವೃತ್ತ ಶಿಕ್ಷಕಿ ಕುಸುಮಾವತಿ ಅತಿಥಿಗಳಾಗಿ ಆಗಮಿಸಿ ಮಾತನಾಡಿ, ಮಕ್ಕಳ ಹಬ್ಬದ ದಿನದಂದು ಮಕ್ಕಳು ಉತ್ಸಾಹದಿಂದ ಭಾಗವಹಿಸಬೇಕು. ಮಕ್ಕಳು ನಗುಮುಖದಿಂದ ತಮ್ಮ ಪ್ರತಿಭೆಯನ್ನು ಬೆಳಗುವಂತಾಗಬೇಕು ಎಂದರು.

ಶಿಕ್ಷಕ ದಯಾನಂದ, ಶಾಲಾ ಆಡಳಿತ ಮಂಡಳಿ ಸದಸ್ಯರು ತಮ್ಮ ಭಾಷಣದಲ್ಲಿ ಮಕ್ಕಳು ದೇಶದ ಕಣ್ಮಣಿಗಳು ಹಾಗೂ ಅವರ ರಕ್ಷಣೆ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆ ಮಾಡಬೇಕು ಎಂದು ತಿಳಿಸಿದರು.

ನಗರಸಭಾ ಸದಸ್ಯ ಉಮೇಶ್ ಸುಬ್ರಮಣಿ, ಶಾಲಾ ಆಡಳಿತ ಮಂಡಳಿ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿದ್ಯಾರ್ಥಿಗಳು ಮಕ್ಕಳ ದಿನಾಚರಣೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಭಾಷಣದ ಮೂಲಕ ವ್ಯಕ್ತಪಡಿಸಿದರು. ತದನಂತರ ತರಗತಿವಾರು ವಿದ್ಯಾರ್ಥಿಗಳಿಂದ ಛದ್ಮವೇಷ ಸ್ಪರ್ಧೆ ನಡೆಸಲಾಯಿತು.

ಕಾಂತೂರು - ಮೂರ್ನಾಡುಮೂರ್ನಾಡು: ಕಾಂತೂರು-ಮೂರ್ನಾಡುವಿನ ಗಾಂಧಿನಗರ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮಕ್ಕಳು ಮತ್ತು ಪಂಚಾಯಿತಿ ಉಪಾಧ್ಯಕ್ಷರು ದೀಪ ಬೆಳಗಿಸಿದರು.

ಆಶಾ ಕಾರ್ಯಕರ್ತೆ ಸ್ವಾಗತಿಸಿ, ಚೈತ್ರ ಪ್ರಾರ್ಥನೆ ನೆರವೇರಿಸಿದರು. ಸಭೆಯಲ್ಲಿ ಪೋಷಕರು, ಮಕ್ಕಳು, ಕಿರಿಯ ಮಹಿಳಾ ಆರೋಗ್ಯ ಕಾರ್ಯಕರ್ತೆ ರೀಟಾ ಹಾಜರಿದ್ದರು. ಮಕ್ಕಳಿಗೆ ಛದ್ಮವೇಷ ಸ್ಪರ್ಧೆ ಏರ್ಪಡಿಸಲಾಗಿತ್ತು. ನಂತರ ವಿಜೇತ ಮಕ್ಕಳಿಗೆ ಬಹುಮಾನ ವಿತರಣೆ ನಡೆಯಿತು.

ಹೆಗ್ಗಳ ಅಂಗನವಾಡಿ ಕೇಂದ್ರಹೆಗ್ಗಳ: ಹೆಗ್ಗಳ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭ ಗ್ರಾ.ಪಂ. ಸದಸ್ಯರಾದ ದಿನೇಶ್ ಬೋಪಣ್ಣ, ಸದಸ್ಯೆ ಲಕ್ಷಿö್ಮ, ಬಾಲವಿಕಾಸ ಸಮಿತಿ ಅಧ್ಯಕ್ಷೆ ವಿದ್ಯಾ, ಅಂಗನವಾಡಿ ಕಾರ್ಯಕರ್ತೆ ಸೌಮ್ಯ, ಸಹಾಯಕಿ ಸುಬೇದ ಹಾಗೂ ಪೋಷಕರು ಹಾಜರಿದ್ದರು.

ಗ್ರಾ.ಪಂ. ಸದಸ್ಯೆ ಲಕ್ಷಿö್ಮ ಅವರು ವೈಯಕ್ತಿಕವಾಗಿ ಅಂಗನವಾಡಿಗೆ ಕುರ್ಚಿಗಳನ್ನು ನೀಡಿದರು. ವಿದ್ಯಾ ಅವರು ಎಲ್ಲರಿಗೂ ಸಿಹಿ ತಿಂಡಿಗಳನ್ನು ವಿತರಿಸಿದರು.

ಕೂರ್ಗ್ ಪಬ್ಲಿಕ್ ಶಾಲೆ*ಗೋಣಿಕೊಪ್ಪ: ಮಕ್ಕಳ ಮನಸ್ಸು ಬಿಳಿಯ ಹಾಳೆ ಇದ್ದಂತೆ. ಅವರಲ್ಲಿ ಸಮಾನತೆ, ಸಹೋದರತೆ, ದೇಶಭಕ್ತಿಯ ಬೀಜಗಳನ್ನು ಬಿತ್ತುವ ಕಾರ್ಯ ಹಿರಿಯರಿಂದ ನಡೆಯಬೇಕು ಎಂದು ಗೋಣಿಕೊಪ್ಪ ಕೂರ್ಗ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಬೆನ್ನಿ ಕೊರಿಯಕೋಸ್ ಕರೆ ನೀಡಿದರು.

ಮಕ್ಕಳ ದಿನಾಚರಣೆ ಅಂಗವಾಗಿ ಕೂರ್ಗ್ ಪಬ್ಲಿಕ್ ಶಾಲೆಯ ಸಾಂಸ್ಕöÈತಿಕ ಸಭಾಂಗಣದಲ್ಲಿ ನಡೆದ ಮಕ್ಕಳ ದಿನಾಚರಣೆಯಲ್ಲಿ ಮಾತನಾಡಿದರು.

ಮಕ್ಕಳಲ್ಲಿ ಜ್ಞಾನವನ್ನು ಬೆಳೆಸಲು ಉತ್ತಮ ಶಿಕ್ಷಣವನ್ನು ನೀಡಬೇಕು. ಇದು ಪ್ರತಿಯೊಬ್ಬ ಪೋಷಕರು ಮಕ್ಕಳಿಗೆ ನೀಡುವ ಬಹುದೊಡ್ಡ ಜೀವನಾಧಾರಿತ ಆಸ್ತಿ ಎಂದು ಹೇಳಿದರು.

ಹಾಡುಗಾರಿಕೆ, ನೃತ್ಯ, ಏಕಪಾತ್ರಾಭಿನಯ ವಿವಿಧ ಸಾಂಸ್ಕöÈತಿಕ ಕಾರ್ಯಕ್ರಮಗಳಲ್ಲಿ ಶಿಕ್ಷಕರು ಭಾಗವಹಿಸಿ ಮಕ್ಕಳ ದಿನಾಚರಣೆಯ ಮನೋರಂಜನೆಯನ್ನು ನೀಡಿದರು.

ನಗರಸಭಾ ಹಿರಿಯ ಪ್ರಾಥಮಿಕ ಶಾಲೆಮಡಿಕೇರಿ: ಮಕ್ಕಳ ದಿನಾಚರಣೆಯ ಪ್ರಯುಕ್ತ ನಗರಸಭಾ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ರೋಟರಿ ಸಂಸ್ಥೆಯ ಸದಸ್ಯ ಡಾ. ಎಂ.ಜಿ. ಮನೋಹರ್ ಪಾಟ್ಕರ್ ಮತ್ತು ಅನಂತ ಸುಬ್ಬರಾವ್ ನೋಟ್ ಪುಸ್ತಕ ಮತ್ತು ಲೇಖನ ಸಾಮಗ್ರಿಗಳನ್ನು ರೋಟರಿ ಸಂಸ್ಥೆಯ ಅಧ್ಯಕ್ಷ ಅಚ್ಚಯ್ಯ ಮತ್ತು ಇತರ ಸದಸ್ಯರ ಉಪಸ್ಥಿತಿಯಲ್ಲಿ ಕೊಡುಗೆಯಾಗಿ ನೀಡಿದರು. ಗೀತಾ ಗಿರೀಶ್ ೨೫ ದೀಪಗಳಿಂದ ಜ್ಞಾನದ ದೀಪವನ್ನು ಬೆಳೆಗಿಸಿದರು.