*ಗೋಣಿಕೊಪ್ಪಲು, ನ. ೧೬: ಪೊನ್ನಂಪೇಟೆ ಕೊಡವ ಸಮಾಜದ ವತಿಯಿಂದ ಕೊಡವ ಆಟ್, ಪಾಟ್ ಪಡಿಪು ಶಿಬಿರವು ತಾ. ೨೩ರಿಂದ ನಡೆಯಲಿದೆ. ಪ್ರತಿ ದಿನ ಸಾಯಂಕಾಲ ೫ ಗಂಟೆಗೆ ಅಪ್ಪಚ್ಚಕವಿ ವಿದ್ಯಾಲಯದ ಆವರಣದಲ್ಲಿ ಜಾನಪದ ತಜ್ಞ ಕಾಳಿಮಾಡ ಎಂ. ಮೋಟಯ್ಯ ಉಚಿತ ತರಬೇತಿ ನೀಡಲಿದ್ದಾರೆ. ಆಸಕ್ತರು ಈ ಶಿಬಿರಕ್ಕೆ ಹಾಜರಾಗಬಹುದು ಎಂದು ಪ್ರಕಟಣೆ ತಿಳಿಸಿದೆ.