ಗೋಣಿಕೊಪ್ಪ ವರದಿ, ನ. ೧೬: ಗೋಣಿಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ ಹಾತೂರು ಸರ್ಕಾರಿ ಪ್ರೌಢಶಾಲೆಗೆ ರೂ. ೩೩ ಸಾವಿರ ವೆಚ್ಚದ ಕುಡಿಯುವ ನೀರಿನ ಶುದ್ಧೀಕರಣ ಉಪಕರಣವನ್ನು ನೀಡಲಾಯಿತು. ಲಯನ್ಸ್ ಕ್ಲಬ್ ಜಿಲ್ಲಾ ರಾಜ್ಯಪಾಲ ವಸಂತಕುಮಾರ್ ಶೆಟ್ಟಿ ಅವರು ಹಸ್ತಾಂತರ ಮಾಡಿದರು. ಮುಖ್ಯಶಿಕ್ಷಕ ಮಹಾದೇವ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮುಕ್ಕಾಟಿರ ಸುಬ್ರಮಣಿ, ಉಪಾಧ್ಯಕ್ಷ ಕೊಡಂದೇರ ಮುದ್ದಪ್ಪ, ಲಯನ್ಸ್ ಕ್ಲಬ್ ಕಾರ್ಯದರ್ಶಿ ಮನ್ನಕಮನೆ ಬಾಲಕೃಷ್ಣ, ಪ್ರಮುಖರಾದ ಮಂಡೇಪAಡ ಸಚಿನ್, ಕರ್ತಮಾಡ ಸೋಮಣ್ಣ ಇದ್ದರು.