ಮಡಿಕೇರಿ, ನ. ೧೬: ಕೊಡವ ಜನಾಂಗಕ್ಕೆ ಬುಡಕಟ್ಟು ಸ್ಥಾನಮಾನ, ಭೂ ರಾಜಕೀಯ ಸ್ವಾಯತ್ತತೆ ಒದಗಿಸುವಂತೆ ಹಾಗೂ ಕೊಡವ ಜನಾಂಗದ ಕೋವಿ ಹಕ್ಕಿಗೆ ಸಂವಿಧಾನಿಕ ಬದ್ಧತೆ ನೀಡುವ ಕುರಿತು ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಜಾಗೃತಿ ಕಾರ್ಯಕ್ರಮವನ್ನು ಅರಪಟ್ಟು ಗ್ರಾಮದ ಕೋಡಿರ ಐನ್ಮನೆಯಲ್ಲಿ ತಾ. ೧೭ ರಂದು (ಇಂದು) ಬೆಳಿಗ್ಗೆ ೧೦.೩೦ಕ್ಕೆ ಏರ್ಪಡಿಸಲಾಗಿದೆ.
ತಾ. ೧೮ ರಂದು (ನಾಳೆ) ೧೧ ಗಂಟೆಗೆ ಕಾವಾಡಿ ಮಹಿಳಾ ಸಮಾಜದಲ್ಲಿ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ಸಂಘಟನೆಯ ಅಧ್ಯಕ್ಷ ಎನ್.ಯು ನಾಚಪ್ಪ ತಿಳಿಸಿದ್ದಾರೆ.