ಮಡಿಕೇರಿ, ನ. ೧೫: ಮಾನವೀಯ ಸ್ನೇಹಿತರ ಒಕ್ಕೂಟದ ವತಿಯಿಂದ ನಾಪೋಕ್ಲು ಹಾಗೂ ಮಡಿಕೇರಿಗಳಲ್ಲಿ ಅಳವಡಿಸಿದ್ದ ಔಷಧಿ ಸಂಗ್ರಹ ಪೆಟ್ಟಿಗೆಗಳಲ್ಲಿ ಸಂಗ್ರಹಿತವಾದ ಅವಧಿ ಮೀರದ ಔಷಧಿ ಹಾಗೂ ಮಾತ್ರೆಗಳನ್ನು ಇದೀಗ ೧೯ನೇ ಬಾರಿಗೆ ಮಡಿಕೇರಿಯ ಶಕ್ತಿ ವೃದ್ಧಾಶ್ರಮಕ್ಕೆ ಇಂದು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಒಕ್ಕೂಟದ ಅಡ್ಮಿನ್‌ಗಳಾದ ಮೈಕಲ್ ವೇಗಸ್, ಎಂ.ಇ. ಮಹಮ್ಮದ್, ಪಿ.ಪಿ. ಸುಕುಮಾರ್, ಸದಸ್ಯ ಜಾಫರ್, ಶಕ್ತಿ ವೃದ್ಧಾಶ್ರಮದ ಮೇಲ್ವಿಚಾರಕ ಸತೀಶ್ ಮುಂತಾದವರು ಉಪಸ್ಥಿತರಿದ್ದರು