ಪೆರಾಜೆ, ನ. ೧೫: ಪೆರಾಜೆ ಚಿಗುರು ಯುವಕ ಮಂಡಲದ ವತಿಯಿಂದ ಶ್ರಮದಾನ ಕಾರ್ಯ ನಡೆಯಿತು. ಕುಂಬಳಚೇರಿ, ಮಜಿಕೋಡಿ ವ್ಯಾಪ್ತಿಯಿಂದ ಇಲ್ಲಿಯ ಪ್ರಾಥಮಿಕ ಶಾಲೆ ಮತ್ತು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಹೋಗುವ ರಸ್ತೆ ಮಳೆಗಾಲದಲ್ಲಿ ನೀರು ನುಗ್ಗಿ ಹೊಂಡಗಳಾಗಿ ಹಾಗೂ ಗಿಡಗಳು ಬೆಳೆದು ನಿಂತಿದ್ದವು. ಇದನ್ನು ಮನಗಂಡ ಚಿಗುರು ಯುವಕಮಂಡಲ ಸದಸ್ಯರ ತಂಡ ತಮ್ಮ ಮಾಸಿಕ ಶ್ರಮದಾನವನ್ನು ಹಮ್ಮಿಕೊಂಡು ರಸ್ತೆ ದುರಸ್ತಿ ಮಾಡುವುದರ ಜೊತೆಗೆ ತೋಡುಗಳಿಗೆ ಸಿಮೆಂಟ್ ಪಾಲ ಅಲ್ಲದೆ ಕೆಲವು ಕಡೆಗಳಲ್ಲಿ ಅಡಿಕೆ ಮರದ ಪಾಲಗಳನ್ನು ಅಳವಡಿಸಿದರು.

ಈ ಕಾರ್ಯದಲ್ಲಿ ಕುಂಬಳಚೇರಿ ವೈನಾಟ್ ಕುಲವನ್ ದೇವಸ್ಥಾನದ ಅಧ್ಯಕ್ಷ ಪದ್ಮಯ್ಯ ಕುಂಬಳಚೇರಿ, ಚಿಗುರು ಯುವಕಮಂಡಲದ ಅಧ್ಯಕ್ಷ ಅರುಣ ಮಜಿಕೋಡಿ, ಕಾರ್ಯದರ್ಶಿ ಭವಿತ್ ಕುಂಬಳಚೇರಿ, ಖಜಾಂಜಿ ಪವನ್ ಕುಂಬಳಚೇರಿ, ಗ್ರಾಮ ಪಂಚಾಯತ್ ಸದಸ್ಯ ಉದಯಚಂದ್ರ ಸೇರಿದಂತೆ ಸಂಘದ ಪದಾಧಿಕಾರಿಗಳು, ಸದಸ್ಯರು ಇದ್ದರು.