ಮಡಿಕೇರಿ, ನ. ೧೫: ಮಡಿಕೇರಿ ಮೂಲದ ಯುವಕನೋರ್ವ ಸುಳ್ಯದ ಯುವತಿಯೊಬ್ಬಳ ಜೊತೆ ಅನುಚಿತವಾಗಿ ವರ್ತಿಸಿ ಜೀವ ಬೆದರಿಕೆ ಒಡ್ಡಿದ್ದಾನೆ. ಅಲ್ಲದೇ ಇಬ್ಬರು ಜತೆಗಿರುವ ಫೋಟೋ ಇಟ್ಟುಕೊಂಡು ಬ್ಲಾö್ಯಕ್‌ಮೇಲ್ ಮಾಡುತ್ತಿದ್ದಾನೆ ಎಂದು ಯುವತಿಯೊಬ್ಬಳು ಸುಳ್ಯ ಠಾಣೆಗೆ ದೂರು ನೀಡಿದ್ದಾಳೆ. ಕೃತ್ಯಕ್ಕೆ ಸಂಬAಧಿಸಿದAತೆ ಆರೋಪಿ ಯುವಕನನ್ನು ಸೋಮವಾರ ಬಂಧಿಸಿದ್ದಾರೆ.
ಯುವಕನ ಹೆಸರು ತಸ್ಲಿಮ್ ಎಂದಾಗಿದ್ದು, ಆತ ಸುಳ್ಯದಲ್ಲಿ ಓದುತ್ತಿದ್ದಾನೆ ಎಂದು ಹೇಳಲಾಗಿದೆ. ಯುವತಿಗೆ ವಂಚನೆ ಹಾಗೂ ಕಿರುಕುಳ ನೀಡಿದ ಆರೋಪ ಎದುರಿಸುತ್ತಿರುವ ಯುವಕ ಕೇವಲ ೨ ತಿಂಗಳ ಹಿಂದೆ ಸಂತ್ರಸ್ತ ಯುವತಿಗೆ ಸಾಮಾಜಿಕ ಜಾಲತಾಣವೊಂದರ ಮೂಲಕ ಪರಿಚಯವಾಗಿದ್ದಾನೆ. ತಾ. ೧೧ ರಂದು ಆ ಯುವಕ ಸಂತ್ರಸ್ತ ಯುವತಿಯ ಬಳಿ ಭೇಟಿಯಾಗಲು ಸುಳ್ಯ ನಗರಕ್ಕೆ ಬರುವಂತೆ ಕರೆಸಿಕೊಂಡಿದ್ದಾನೆ. ಅದರಂತೆ ಆಕೆ ಅಂದು ಮಧ್ಯಾಹ್ನ ೧೨ ಗಂಟೆ ಸುಮಾರಿಗೆ ಆತನನ್ನು ಸುಳ್ಯದಲ್ಲಿ ಭೇಟಿಯಾಗಿದ್ದಾಳೆ.
ಆಕೆಯ ಮನವೊಲಿಸಿ ಬೈಕಿನಲ್ಲಿ ಕುಳ್ಳಿರಿಸಿಕೊಂಡು ಬಳಿಕ ಆತ ಮಡಿಕೇರಿಗೆ ಹೋಗುವ ದಾರಿಯಲ್ಲಿ ಬೈಕನ್ನು ಚಲಾಯಿಸಿದ್ದಾನೆ. ಯುವತಿಯು ಅದಕ್ಕೆ ಆಕ್ಷೇಪಿಸಿದ್ದಾಳೆ. ಆದರೆ ಆಕೆಯ ಮಾತನ್ನು ಲೆಕ್ಕಿಸದೇ ಬೈಕನ್ನು ಮಡಿಕೇರಿ ರಾಜಾಸೀಟ್ ಸಮೀಪಕ್ಕೆ ಕರೆತಂದು ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ಇಬ್ಬರೂ ಒಟ್ಟಾಗಿರುವ ಫೋಟೋ ತೆಗೆದುಕೊಂಡಿದ್ದಾನೆ. ಅಲ್ಲದೆ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿ ಮಾನಭಂಗಕ್ಕೆ ಯತ್ನಿಸಿದ್ದಾನೆ ಎಂದು ಸಂತ್ರಸ್ತ ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ಈತನ ಕೃತ್ಯವನ್ನು ತಾನು ವಿರೋಧಿಸಿದಾಗ ಆತ ಕೊಲ್ಲುವುದಾಗಿ ಜೀವ ಬೆದರಿಕೆ ಒಡ್ಡಿದ್ದು, ಆಕೆಯನ್ನು ಸುಳ್ಯಕ್ಕೆ ಕರೆ ತಂದು ಬಿಟ್ಟಿದ್ದಾನೆ. ಈ ಬಗ್ಗೆ ಆಕೆ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.
ಈ ಕುರಿತು ಮಾಹಿತಿ ನೀಡಿದ ಸುಳ್ಯ ನಗರ ಠಾಣೆ ಸಬ್ ಇನ್ಸ್ಪೆಕ್ಟರ್ ದಿಲೀಪ್ ಅವರು ಯುವತಿ ನೀಡಿದ ದೂರಿನ ಮೇರೆಗೆ ಕೃತ್ಯ ನಡೆದ ಮಾರನೇ ದಿನವೇ ಐಪಿಸಿ ಸೆಕ್ಷನ್ ೫೦೬ ಮತ್ತು ೩೫೪ಏ ಅಡಿಯಲ್ಲಿ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸಲಾಗುತಿತ್ತು. ಮಡಿಕೇರಿಗೆ ತೆರಳಿ ಸ್ಥಳ ಮಹಜರನ್ನೂ ಮಾಡಲಾಗಿದೆ. ಸೋಮವಾರ ಆರೋಪಿಯನ್ನು ಸುಳ್ಯದಲ್ಲೇ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ತಿಳಿಸಿದರು.
-ಕೋವರ್ ಕೊಲ್ಲಿ ಇಂದ್ರೇಶ್