ಮಡಿಕೇರಿ, ನ. ೧೫: ಇತ್ತೀಚೆಗೆ ಕರ್ನಾಟಕ ಸ್ಪೋರ್ಟ್ಸ್ ಡಾನ್ಸ್ ಅಸೋಸಿಯೇಷನ್ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ನಾಟ್ಯಾಂಜಲಿ ನೃತ್ಯ ಮತ್ತು ಸಂಗೀತ ಸಂಸ್ಥೆ ವಿದ್ಯಾರ್ಥಿಗಳು ೨೪ ಚಿನ್ನ, ೧೭ ಬೆಳ್ಳಿ, ೧೨ ಕಂಚಿನ ಪದಕಗಳನ್ನು ಪಡೆದು ಒಟ್ಟು ೫೩ ಪದಕಗಳೊಂದಿಗೆ ರಾಷ್ಟ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಅತ್ಯುತ್ತಮ ನೃತ್ಯ ಸಂಸ್ಥೆ (ರಿ) ಹಾಗೂ ಉತ್ತಮ ನೃತ್ಯ ಸಂಯೋಜಕಿ ಪ್ರಶಸ್ತಿಯನ್ನು ಈ ಸಂಸ್ಥೆಯ ತರಬೇತುದಾರರಾದ ಹೇಮಾವತಿ ಕಾಂತ್ರಾಜ್, ಶ್ವೇತಾ ಹಾಗೂ ಕಾವ್ಯಶ್ರೀ ಅವರುಗಳು ಪಡೆದುಕೊಂಡರು.