ಸೋಮವಾರಪೇಟೆ,ನ.೧೫: ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಆಶ್ರಯದಲ್ಲಿ ಸೋಮವಾರಪೇಟೆ ನ್ಯಾಯಾಲಯದ ಮೂಲಕ ಆಯೋಜಿಸಲಾಗಿದ್ದ ಸ್ವಾತಂತ್ರೊö್ಯÃತ್ಸವದ ಅಮೃತ ಮಹೋತ್ಸವದ ಕೊನೆಯ ದಿನದ ಕಾರ್ಯಕ್ರಮದ ಅಂಗವಾಗಿ ಇಲ್ಲಿನ ನ್ಯಾಯಾಧೀಶರುಗಳು ರಸ್ತೆಗಿಳಿದು ಸಾರ್ವಜನಿಕರಲ್ಲಿ ಕಾನೂನಿನ ಅರಿವು ಮೂಡಿಸಿದರು.
ಇಲ್ಲಿನ ನ್ಯಾಯಾಲಯದ ಆವರಣದಿಂದ ಪ್ರಾರಂಭಗೊAಡ ಜಾಥಾಕ್ಕೆ ನ್ಯಾಯಾಧೀಶರುಗಳು ಚಾಲನೆ ನೀಡಿದರು. ಇಷ್ಟೇ ಅಲ್ಲದೇ ಜಾಥಾದಲ್ಲಿ ಕಾಲ್ನಡಿಗೆ ಮೂಲಕ ತೆರಳಿದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೋಕುಲ್ ಹಾಗೂ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಪ್ರತಿಭಾ ಅವರುಗಳು ಸಾರ್ವಜನಿಕರ ಗಮನ ಸೆಳೆದರು.
‘ನ್ಯಾಯ ನಿಮ್ಮದು-ನೆರವು ನಮ್ಮದು’ ಎಂಬ ಘೋಷ ವಾಕ್ಯದೊಂದಿಗೆ ಧ್ವನಿವರ್ಧಕದ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ ಜಾಥಾವು, ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ತೆರಲಿ ಇಲ್ಲಿನ ಪಟ್ಟಣ ಪಂಚಾಯಿತಿ ಆವರಣದಲ್ಲಿ ಸಮಾಪನಗೊಂಡಿತು.
ಜಾಥಾದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಪಟ್ಟಣದ ಆಟೋ ಚಾಲಕರು, ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಹಾಗೂ ಸಂಘಸAಸ್ಥೆಗಳ ಪ್ರಮುಖರು ಭಾಗಿಯಾಗಿದ್ದರು.
ಇಲ್ಲಿನ ಪ.ಪಂ. ಸಭಾಂಗಣದಲ್ಲಿ ಆಯೋಜಿಸಿದ್ದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ಸಿವಿಲ್ ನ್ಯಾಯಾಧೀಶರಾದ ಗೋಕುಲ್ ಅವರು, ನ್ಯಾಯಾಲಯದ ಮೂಲಕ ಅರ್ಹ ಮಂದಿಗೆ ಉಚಿತ ಕಾನೂನಿನ ನೆರವು ಒದಗಿಸಲಾಗುತ್ತಿದ್ದು, ಈ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಯಾರೂ ಸಹ ನ್ಯಾಯದಿಂದ ವಂಚಿತರಾಗಬಾರದು ಎಂಬ ಸದುದ್ದೇಶದಿಂದ ನ್ಯಾಯಾಂಗ ಇಲಾಖೆಯೇ ಖುದ್ದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಅನ್ಯಾಯಕ್ಕೊಳಗಾದರು ಈ ಯೋಜನೆಯ ಮೂಲಕ ಉಚಿತವಾಗಿ ವಕೀಲರನ್ನು ನೇಮಿಸಿಕೊಂಡು ನ್ಯಾಯಾಲಯದ ಮೂಲಕ ನ್ಯಾಯ ಪಡೆಯಬಹುದು ಎಂದು ಗೋಕುಲ್ ಅವರು ತಿಳಿಸಿದರು.
ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಪ್ರತಿಭಾ ಅವರು ಮಾತನಾಡಿ, ರಾಜಿಯಾಗುವಂತಹ ಅನೇಕ ಪ್ರಕರಣಗಳು ಇಂದಿಗೂ ನ್ಯಾಯಾಲಯದಲ್ಲಿ ವಿಚಾರಣೆಗೆ ಬರುತ್ತಿದ್ದು, ಇವುಗಳನ್ನು ಲೋಕ ಅದಾಲತ್ ಮೂಲಕ ರಾಜೀ ಸಂಧಾನದೊAದಿಗೆ ಇತ್ಯರ್ಥಗೊಳಿಸಿಕೊಳ್ಳಬಹುದು. ಈ ಬಗ್ಗೆಯೂ ಕಕ್ಷಿದಾರರು ಮುಂದೆಬರಬೇಕೆAದು ಸಲಹೆ ನೀಡಿದರು.
ವೇದಿಕೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಕೆ.ಎಸ್. ಪದ್ಮನಾಭ್ ಅವರು ಉಪಸ್ಥಿತರಿದ್ದು, ಲೋಕ ಅದಾಲತ್ ಬಗ್ಗೆ ಮಾಹಿತಿ ಒದಗಿಸಿದರು. ಕಾರ್ಯಕ್ರಮದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಬಿ.ಜಿ. ಮಹೇಶ್, ಕಾರ್ಮಿಕ ಇಲಾಖೆಯ ಲೀನಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಗುರುಬಸಮ್ಮ, ಸಿಆರ್‌ಪಿ ಕಾಜೂರು ಸತೀಶ್, ತಾ.ಪಂ. ವ್ಯವಸ್ಥಾಪಕ ರವೀಂದ್ರ ಸೇರಿದಂತೆ ಇತರರು ಉಪಸ್ಥಿತರಿದ್ದರು.
ನ್ಯಾಯಾಂಗ ಇಲಾಖೆ ಮೂಲಕ ಹೊರತಂದಿರುವ ಕಾನೂನು ಅರಿವು ಹೊಂದಿರುವ ಕಾಲ್ಸಾ ಗೀತೆಗೆ, ಇಲ್ಲಿನ ಎಸ್‌ಜೆಎಂ ಶಾಲೆಯ ವಿದ್ಯಾರ್ಥಿಗಳು ನೃತ್ಯ ಮಾಡುವ ಮೂಲಕ ಕಾನೂನಿನ ಅರಿವು ಮೂಡಿಸಿದರು.