ಕೂಡಿಗೆ, ನ. ೧೫: ಸೋಮವಾರಪೇಟೆ ತಾಲೂಕು ಮಟ್ಟದ ೨೦೨೧-೨೨ ಸಾಲಿನ ಪದವಿ ಪೂರ್ವ ಕಾಲೇಜುಗಳ ಹಾಕಿ ಪಂದ್ಯಾಟದಲ್ಲಿ ಕೂಡಿಗೆ ಪದವಿ ಪೂರ್ವ ಕಾಲೇಜು ತಂಡ ಪ್ರಥಮ ಸ್ಥಾನ ಗಳಿಸಿದೆ.

ಪಂದ್ಯಾಟವು ಕೂಡಿಗೆ ಕ್ರೀಡಾ ಶಾಲೆಯ ಹಾಕಿ ಮೈದಾನದಲ್ಲಿ ನಡೆಯಿತು. ಉದ್ಘಾಟನೆಯನ್ನು ಕಾಲೇಜು ಪ್ರಾಂಶುಪಾಲ ಡಾ ಬಸಪ್ಪ ನೆರವೇರಿಸಿದರು ದ್ವಿತೀಯ ಸ್ಥಾನವನ್ನು ಕುಶಾಲನಗರ ಅನುಗ್ರಹ ಕಾಲೇಜು ತಂಡ ಪಡೆಯಿತು ಕೂಡಿಗೆ ಕಾಲೇಜು ತಂಡಕ್ಕೆ ಹಾಕಿ ತರಬೇತಿದಾರ ವೆಂಕಟೇಶ ತರಬೇತಿ ನೀಡಿದರು. ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಕೆ.ಕೆ. ನಾಗರಾಜಶೆಟ್ಟಿ, ಪ್ರಾಂಶುಪಾಲ ಡಾ, ಬಸಪ್ಪ, ಉಪನ್ಯಾಸಕರಾದ ಸತೀಶ್, ರಮೇಶ್ ಕಾವೇರಮ್ಮ ಪಾವನ ಇದ್ದರು.