ವೀರಾಜಪೇಟೆ, ನ. ೧೫: ಸರ್ಕಾರಿ ಆಸ್ಪತ್ರೆಗೆ ದಾಖಲಾದ ವಯೊವೃದ್ಧೆ ಸಾವಿಗೀಡಾಗಿದ್ದು, ವಾರಸುದಾರರು ಬಾರದ ಕಾರಣ ಮೃತದೇಹವನ್ನು ಮಡಿಕೇರಿಯ ಶವಾಗಾರದಲ್ಲಿರಿಸಲಾಗಿದೆ.

ಕಳೆದ ತಾ. ೩೧ ರಂದು ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ಆಗಮಿಸಿ ಎರವ ಜನಾಂಗದ ದೇವಿ, ಪತಿ ಮುತ್ತ ಪ್ರಾಯ ೬೦ ವರ್ಷ ಎಂದು ನಮೂದಿಸಿ ಒಳರೋಗಿಯಾಗಿ ದಾಖಲಾಗಿದ್ದಾರೆ. ತಾ. ೧೨ ರಂದು ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತರ ಸಂಬAಧಿಕರು ಇದ್ದಲ್ಲಿ ಗ್ರಾಮಾಂತರ ಪೊಲೀಸ್ ಠಾಣೆಯ ಉಪ ನಿರೀಕ್ಷಕರು, (೯೪೮೦೮೦೪೯೫೬), (೦೮೨೭೪-೨೫೭೪೬೨), ಅಥವಾ ಪೊಲೀಸ್ ಕಂಟ್ರೋಲ್ ರೂಂ ೦೮೨೭೨-೨೨೮೩೩೦ ಸಂಪರ್ಕಿಸುವAತೆ ಇಲಾಖೆಯು ಕೋರಿದೆ.