ಮಡಿಕೇರಿ, ನ. ೧೬: ಪುತ್ತರಿ ಹಬ್ಬದ ಅಂಗವಾಗಿ ಸಂಪ್ರದಾಯದAತೆ ನಡೆದುಕೊಂಡು ಬರುತ್ತಿರುವ ಪುತ್ತರಿ ಈಡ್ ಕಾರ್ಯಕ್ಕೆ ಇಂದು ಮಡಿಕೇರಿ ಕೊಡವ ಸಮಾಜದ ಮೂಲಕ ಚಾಲನೆ ನೀಡಲಾಗಿದೆ. ನಗರದ ಕೊಡವ ಮಂದ್‌ನಲ್ಲಿ ಸಮಾಜದ ಸದಸ್ಯರು ಜನಾಂಗದ ಪ್ರಮುಖರು ಪಾಲ್ಗೊಂಡು ಸಾಂಪ್ರದಾಯಿಕವಾದ ಪುತ್ತರಿ ಕೋಲ್ ಮತ್ತಿತರ ಜನಪದೀಯ ವಿಚಾರಗಳ ಬಗ್ಗೆ ತಾಲೀಮು ಆರಂಭಿಸಿದರು. ಮೂರು ದಿನಗಳ ಕಾಲ ಈ ಕಾರ್ಯ ಸಂಜೆ ೬.೩೦ ರಿಂದ ಜರುಗಲಿದೆ. ಸಮಾಜದ ಅಧ್ಯಕ್ಷ ಕೊಂಗAಡ ಎಸ್. ದೇವಯ್ಯ ಸೇರಿದಂತೆ ಆಡಳಿತ ಮಂಡಳಿ ಪ್ರಮುಖರು ಪಾಲ್ಗೊಂಡಿದ್ದರು.