ಮಡಿಕೇರಿ, ನ. ೧೬: ಜಿಲ್ಲೆಯಲ್ಲಿರುವ ಪ್ರಮುಖ ಪವಿತ್ರ ಸ್ಥಾನಗಳಾದ ಶ್ರೀ ಭಗಂಡೇಶ್ವರ ದೇವಾಲಯ ಭಾಗಮಂಡಲ, ಶ್ರೀ ತಲಕಾವೇರಿ ಕ್ಷೇತ್ರ, ಶ್ರೀ ಪಾಡಿ ಇಗ್ಗುತಪ್ಪ ದೇವಾಲಯ ಕಕ್ಕಬೆ, ಶ್ರೀ ರಾಮೇಶ್ವರ ದೇವಾಲಯ ಇರ್ಪು ಹಾಗೂ ಶ್ರೀ ಓಂಕಾರೇಶ್ವರ ದೇವಾಲಯ, ಮಡಿಕೇರಿ ಇವುಗಳನ್ನು ಜಿಲ್ಲೆಯಲ್ಲಿ ಪ್ರವಾಸಿ ತಾಣಗಳೆಂದು ಪರಿಗಣಿಸಲಾಗಿರುವುದರಿಂದ ಈ ಎಲ್ಲಾ ದೇವಾಲಯಗಳನ್ನು ಧಾರ್ಮಿಕ ಕ್ಷೇತ್ರ (ಟೆಂಪಲ್ ಟೌನ್) ಎಂದು ಪರಿಗಣಿಸಬೇಕಾಗಿ ಹಾಗೂ ಪ್ರವಾಸೋದ್ಯಮದಿಂದ ಕೈ ಬಿಡುವಂತೆ ಶ್ರೀ ಕಾವೇರಿ ಹಿತರಕ್ಷಣಾ ಸಮಿತಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ಧಾರ್ಮಿಕ ಕ್ಷೇತ್ರ (ಟೆಂಪಲ್ ಟೌನ್) ಅಡಿಯಲ್ಲಿ ಬರುವ ಎಲ್ಲಾ ಕ್ರಮಗಳನ್ನು ಈ ಮೇಲಿನ ಎಲ್ಲಾ ದೇವಾಲಯಗಳಿಗೆ ಅಳವಡಿಸಬೇಕಾಗಿದೆ ಈಗಾಗಲೇ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಬಂದು ಕ್ಷೇತ್ರಗಳ ಪಾವಿತ್ರö್ಯತೆಗೆ ಸಾಕಷ್ಟು ಧಕ್ಕೆಯನ್ನು ಉಂಟು ಮಾಡಿ ಕ್ಷೇತ್ರದ ಮಹತ್ವ ಹಾಗೂ ಪಾವಿತ್ರö್ಯತೆಯನ್ನು ಹದಗೆಡಿಸುತ್ತಿದ್ದಾರೆ. ಇದರಿಂದಾಗಿ ಜಿಲ್ಲೆಯ ಬಹುತೇಕ ದೈವಭಕ್ತರಿಗೆ ಮಾನಸಿಕವಾಗಿ ತೀವ್ರವಾದ ವೇದನೆಯಾಗುತ್ತಿದೆ ಎಂದು ಮನವಿಯಲ್ಲಿ ಕೋರಲಾಗಿದೆ. ಈ ಸಂದರ್ಭ ಸಮಿತಿ ಅಧ್ಯಕ್ಷ ಮುದ್ದಂಡ ದೇವಯ್ಯ, ಹಾಗೂ ಪದಾಧಿಕಾರಿಗಳಿದ್ದರು.