ಚೆಟ್ಟಳ್ಳಿ, ನ. ೧೫: ಸಮಾಜ ಸೇವಕರಾಗಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಪುತ್ತರಿರ ಪಪ್ಪು ತಿಮ್ಮಯ್ಯ ಹಾಗೂ ಶೂಟಿಂಗ್ನಲ್ಲಿ ಸಾಧನೆ ತೋರುತ್ತಿರುವ ಪುತ್ತರಿರ ರಿಶಾಂಕ್ ನಂಜಪ್ಪ ಅವರನ್ನು ಪುತ್ತರಿರ ಕುಟಂಬಸ್ಥರು ಪುತ್ತರಿರ ಐನ್ ಮನೆಯಲ್ಲಿ ನಡೆದ ಗುರುಕಾರೋಣನಿಗೆ ಮೀದಿ ಇಡುವ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಿದರು.