ಮಡಿಕೇರಿ, ನ. ೧೫: ಚೆಂಬು ಗ್ರಾಮದ ಬಾಲಂಬಿಯಲ್ಲಿ ಗೋ ಪೂಜಾ ಕಾರ್ಯಕ್ರಮವು ಯುವ ಕೇಸರಿ ಯುವಕ ಮಂಡಲದ ವತಿಯಿಂದ ನಡೆಯಿತು. ಗೋಪೂಜೆಯ ಬಳಿಕ ಬಜರಂಗದಳದ ಸಂಚಾಲಕ ಅಭಿಷೇಕ್ ಅವರು ಗೋಪೂಜೆಯ ಮಹತ್ವ ಹಾಗೂ ಗೋವಿನ ಬಗ್ಗೆ ಭೌದ್ಧಿಕ್ ಕಾರ್ಯ ಕ್ರಮ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಸುಬ್ರಮಣ್ಯ ಉಪಾಧ್ಯಾಯ , ತೀರ್ಥರಾಮ ಪೂಜಾರಿಗದ್ದೆ , ಅನಂತ ಎನ್ . ಸಿ, ರಮೇಶ್ ಹುಲ್ಲು ಬೆಂಕಿ ಹಾಗೂ ವಸಂತ ಊರುಬೈಲು , ಗುಣವಂತ ಬಾಲಂಬಿ , ದಿನೇಶ್ ಸಣ್ಣಮನೆ, ಶ್ರೀನಿವಾಸ ನಿಡಿಂಜಿ ಮತ್ತು ಸಂಘದ ಸಂಘಟಕ ಇಂದ್ರೇಶ್ ಬಾಲಂಬಿ, ಹಾಗೂ ಅಧ್ಯಕ್ಷ ಸುಧೀರ್ ಬಾಲಂಬಿ ಮೊದಲಾದವರು ಉಪಸ್ಥಿತರಿದ್ದರು.