ವೀರಾಜಪೇಟೆ, ನ. ೧೬: ಗ್ರಾಮ ಪಂಚಾಯತಿ ಕಚೇರಿ ಸೇರಿದಂತೆ ಅಂಚೆ ಕಚೇರಿಯಲ್ಲಿ ಕಳ್ಳತನ ವೆಸಗಿರುವ ಘಟನೆ ವೀರಾಜಪೇಟೆ ಕದನೂರು ಗ್ರಾಮದಲ್ಲಿ ನಡೆದಿದೆ.
ವೀರಾಜಪೇಟೆ ತಾಲೂಕು ವ್ಯಾಪ್ತಿಯ ಕದನೂರು ಗ್ರಾಮ ಪಂಚಾಯಿತಿ ಕಚೇರಿಯ ಮುಂದಿನ ಬಾಗಿಲ ಬೀಗ ಮುರಿದು ಒಳನುಗ್ಗಿ ಕಚೇರಿಯಲ್ಲಿದ್ದ ಬೆಲೆ ಬಾಳುವ ಗಣಕಯಂತ್ರದ ಮಾನಿಟರ್, ಸಿ.ಸಿ.ಕ್ಯಾಮರಾ ಕಳವು ಮಾಡಿ, ಸನಿಹದಲ್ಲಿರುವ ಅಂಚೆ ಕಚೇರಿಯಲ್ಲಿ ಕರ್ತವ್ಯಕ್ಕೆ ಉಪಯೋಗವಾಗುತ್ತಿದ್ದ ಮೋಟರೊಲ ಕಂಪೆನಿಯ ಮೊಬೈಲ್ ಕಳ್ಳತನ ಮಾಡಿ ಪರಾರಿಯಾಗಿದ್ದಾನೆ. ಪಂಚಾಯಿತಿ ಗುಮಾಸ್ತ ಮುಖೇಶ್ ಎಂಬವರು ಎಂದಿನAತೆ ಬೆಳಿಗ್ಗೆ ಕಚೇರಿಗೆ ಆಗಮಿಸಿದ ಸಂದರ್ಭದಲ್ಲಿ ಕಚೇರಿಯ ಬೀಗ ಮುರಿದಿರುವುದು ಗೊಚರಿಸಿದೆ. ನಂತರದಲ್ಲಿ ಪಿ.ಡಿ.ಓ.ಗೆ ಮಾಹಿತಿ ನೀಡಿದ್ದಾರೆ. ಗ್ರಾಮ ಪಂಚಾಯಿತಿ ಪಿ.ಡಿ.ಓ ಮಂಜುಳ ಅವರು ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ದೂರು ಸ್ವೀಕರಿಸಿದ ಠಾಣಾಧಿಕಾರಿ ಸಿದ್ಧಲಿಂಗ ಬಿ. ಬಾಣಸೆ ಅವರು ಸಿಬ್ಬಂದಿಗಳೋAದಿಗೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದು, ಜಿಲ್ಲಾ ಶ್ವಾನದÀಳದಿಂದ ಕಚೇರಿಯ ಆವರಣ, ಕಚೇರಿಯ ಓಳಭಾಗಗಳಲ್ಲಿ ಪರಿಶೋಧನೆ ನಡೆಸಲಾಗಿದೆ. -ಕೆ.ಕೆ.ಎಸ್.