ಸೋಮವಾರಪೇಟೆ, ನ. ೧೬: ಕಳೆದ ೨೦೨೦ರ ಲಾಕ್‌ಡೌನ್ ಸಂದರ್ಭ ಸ್ಥಗಿತಗೊಳಿಸಲಾದ ಕೆಲವೊಂದು ಸರ್ಕಾರಿ ಬಸ್‌ಗಳನ್ನು ಇಂದಿಗೂ ಪುನರಾರಂಭಿಸಿಲ್ಲ. ಇದರಿಂದಾಗಿ ಸಾರ್ವಜನಿಕ ಪ್ರಯಾಣಿಕರಿಗೆ ಸಮಸ್ಯೆಯಾಗು ತ್ತಿದ್ದು, ತಕ್ಷಣ ಬಸ್‌ಗಳನ್ನು ಆರಂಭಿಸುವAತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಬಗ್ಗೆ ಪುತ್ತೂರು ವಿಭಾಗದ ನಿಯಂತ್ರಣಾಧಿಕಾರಿಗಳಿಗೆ ಹಲವಷ್ಟು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.
ಕಳೆದ ಲಾಕ್‌ಡೌನ್‌ಗೂ ಮುನ್ನ ಸೋಮವಾರಪೇಟೆ-ಸುಬ್ರಹ್ಮಣ್ಯ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಾರಿಗೆ ಬಸ್‌ನ್ನು, ನಂತರದ ದಿನಗಳಲ್ಲಿ ಸ್ಥಗಿತಗೊಳಿಸಲಾಯಿತು. ಇದೀಗ ಎಲ್ಲೆಡೆ ಎಂದಿನAತೆ ಜನಜೀವನ ಆರಂಭಗೊAಡಿದ್ದರೂ ಬಸ್‌ಗಳು ಮಾತ್ರ ಬರುತ್ತಿಲ್ಲ. ಇದರಿಂದಾಗಿ ಸೋಮವಾರಪೇಟೆ-ಸುಬ್ರಹ್ಮಣ್ಯ ಸಂಚರಿಸುವ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಧರ್ಮಸ್ಥಳ ಘಟಕದ ರೂಟ್ ಸಂಖ್ಯೆ ೫/೬, ಬಿ.ಸಿ. ರೋಡ್ ಘಟಕದ ೫೫/೫೬, ಮಡಿಕೇರಿ ಘಟಕದ ೧೭೯ ರೂಟ್ ಸಂಖ್ಯೆಯ ಬಸ್‌ಗಳು ಸ್ಥಗಿಗೊಂಡಿರುವುದರಿAದ ಸುಬ್ರಹ್ಮಣ್ಯ, ಧರ್ಮಸ್ಥಳ, ಮಂಗಳೂರು, ಹಾಸನಗಳಿಗೆ ತೆರಳಲು ವಿದ್ಯಾರ್ಥಿಗಳೂ ಸೇರಿದಂತೆ ಸಾರ್ವಜನಿಕ ಪ್ರಯಾಣಿಕರಿಗೆ ಸಮಸ್ಯೆಯಾಗಿದೆ. ತಕ್ಷಣ ಹಿಂದಿನAತೆ ಬಸ್‌ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.