ಮಡಿಕೇರಿ, ನ. ೧೪: ಜಿಲ್ಲಾ ಕೇಂದ್ರವಾಗಿರುವ ಮಡಿಕೇರಿ ನಗರದ ಹೃದಯಭಾಗವಾದ ನಗರದ ಕೊಡವ ಸಮಾಜದ ಬಳಿಯಲ್ಲಿ ಕಳೆದ ಹಲವಷ್ಟು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಠಾಣೆ ನಗರದಿಂದ ಅನತಿ ದೂರಕ್ಕೆ ಸ್ಥಳಾಂತರಗೊAಡು ಸುಮಾರು ಒಂದು ವರ್ಷ ಕಳೆದಿದೆ. ಇದೀಗ ಈ ಠಾಣೆಯನ್ನು ಮತ್ತೆ ಹಿಂದಿನ ಸ್ಥಳಕ್ಕೆ ಸ್ಥಳಾಂತರಿಸುವ ನಿಟ್ಟಿನಲ್ಲಿ ಬಿರುಸಿನ ಕಾಮಗಾರಿ ನಡೆಯುತ್ತಿದೆ.
ಪುರಾತನವಾಗಿದ್ದ ಹಿಂದಿನ ಕಟ್ಟಡ ತೀರಾ ದುರಸ್ತಿಯ ಹಂತಕ್ಕೆ ತಲುಪಿದ್ದು, ಕಟ್ಟಡ ಅಪಾಯಕಾರಿ ಹಂತಕ್ಕೆ ತಲುಪಿತ್ತು. ಇದರೊಂದಿಗೆ ೨೦೧೮ ಹಾಗೂ ೨೦೧೯ರಲ್ಲಿ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯ ಕಾರಣದಿಂದಲೂ ಕಟ್ಟಡ ಇನ್ನಷ್ಟು ಅಪಾಯಕಾರಿ ಹಂತಕ್ಕೆ ತಲುಪಿದ್ದು, ಕುಸಿಯುವ ಪರಿಸ್ಥಿತಿಗೆ ತಲುಪಿತ್ತು. ಈ ಕಾರಣದಿಂದಾಗಿ ಆಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಡಾ. ಸುಮನ್ ಪಣ್ಣೇಕರ್ ಅವರು ಈ ಬಗ್ಗೆ ಗಮನಹರಿಸಿ ಕಟ್ಟಡವನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲು ಮುಂದಾಗಿದ್ದರು.
೨೦೨೦ರ ಸೆಪ್ಟೆಂಬರ್-ಅಕ್ಟೋಬರ್ ತಿಂಗಳಿನಲ್ಲಿ ನಗರ ಠಾಣೆಯನ್ನು ಸಂಪೂರ್ಣವಾಗಿ ಈ ಹಿಂದಿನ ಡಿವೈಎಸ್ಪಿ ಕಚೇರಿ ಇದ್ದ ಕಟ್ಟಡ (ಗ್ರಾಮಾಂತರ ಠಾಣೆ ಆವರಣ)ಕ್ಕೆ ಸ್ಥಳಾಂತರಿಸಲಾಗಿತ್ತು. ನಗರ ವೃತ್ತ ನಿರೀಕ್ಷಕರ ಕಚೇರಿ, ನಗರ ಠಾಣೆ ಇಲ್ಲಿಗೆ ಸ್ಥಳಾಂತರಗೊAಡರೆ ಇದೇ ಕಟ್ಟಡದಲ್ಲಿದ್ದ ಮಹಿಳಾ ಪೊಲೀಸ್ ಠಾಣೆಯನ್ನು ಸುಬ್ರಹ್ಮಣ್ಯನಗರ ವ್ಯಾಪ್ತಿಯಲ್ಲಿನ ಡಿಎಆರ್ ವಸತಿ ಗೃಹವೊಂದನ್ನು ಮಹಿಳಾ ಠಾಣೆಯನ್ನಾಗಿ ಪರಿವರ್ತಿಸಿ ಅಲ್ಲಿಗೆ ಸ್ಥಳಾಂತರಿಸಲಾಗಿತ್ತು.
ನಗರದ ಹೃದಯಭಾಗದಲ್ಲೇ ಪೊಲೀಸ್ ಠಾಣೆ ಇರಬೇಕೆಂಬ ಕಾರಣವೂ ಒಂದೆಡೆಯಿತ್ತಾದರೂ, ಆಗಿನ (ಮೊದಲ ಪುಟದಿಂದ) ಪರಿಸ್ಥಿತಿಯಲ್ಲಿ ಸ್ಥಳಾಂತರ ಅನಿವಾರ್ಯವಾಗಿತ್ತು. ಇದೀಗ ಕಟ್ಟಡ ಸ್ಥಳಾಂತರಗೊAಡು ಒಂದು ವರ್ಷವೇ ಕಳೆದಿದ್ದು, ಮರು ಸ್ಥಳಾಂತರಕ್ಕೆ ಪ್ರಯತ್ನ ಆರಂಭಗೊAಡಿದೆ. ಹಿಂದಿನ ಕಟ್ಟಡವನ್ನು ದುರಸ್ತಿಗೊಳಿಸುವ ಕಾಮಗಾರಿ ಪ್ರಸ್ತುತ ನಡೆಯುತ್ತಿದೆ. ಆದರೆ ಈ ಜಾಗದ ಎದುರು ಪುರಾತತ್ವ ಇಲಾಖೆಗೆ ಸೇರಿರುವ ಕೋಟೆ ಇರುವುದರಿಂದ ಈ ಕಟ್ಟಡವನ್ನು ಆಧುನಿಕ ಶೈಲಿಯಲ್ಲಿ ನಿರ್ಮಾಣ ಮಾಡುವಂತಿಲ್ಲ.
ಈ ಸಂಬAಧದ ಕಾರಣ ದಿಂದಾಗಿ ಈ ಹಿಂದೆ ಇದ್ದ ಕಟ್ಟಡದ ಶೈಲಿಯಲ್ಲಿಯೇ ಇದನ್ನು ದುರಸ್ತಿಪಡಿಸ ಲಾಗುತ್ತಿದೆ. ಇದಕ್ಕೆ ಇಲಾಖೆಯ ಮೂಲಕ ರೂ. ೧.೧೦ ಕೋಟಿಯಷ್ಟು ಅನುದಾನವನ್ನು ಮಂಜೂರು ಮಾಡ ಲಾಗಿದ್ದು, ಹಳೆಯ ಮಾದರಿಯಲ್ಲಿಯೇ ಕಟ್ಟಡವನ್ನು ಉಳಿಸಿಕೊಂಡು ಕೇವಲ ಅಗತ್ಯವಿರುವ ದುರಸ್ತಿ ಕೆಲಸವನ್ನಷ್ಟೇ ನಿರ್ವಹಿಸಲಾಗುತ್ತಿದೆ.
ಕಟ್ಟಡದ ವಿನ್ಯಾಸದಲ್ಲಿ ಯಾವುದೇ ಬದಲಾವಣೆ ಇಲ್ಲ. ಗೋಡೆ-ನೆಲದ ದುರಸ್ತಿ, ಹಾಳಾಗಿದ್ದ ಮರ ಮುಟ್ಟುಗಳು, ಹೆಂಚುಗಳ ಬದಲಾವಣೆ, ಪ್ಲಾಸ್ಟರಿಂಗ್ನAತಹ ಕೆಲಸಗಳನ್ನು ಮಾತ್ರ ಕೈಗೆತ್ತಿಕೊಳ್ಳ ಲಾಗಿದೆ. ಕರ್ನಾಟಕ ಪೊಲೀಸ್ ಗೃಹನಿರ್ಮಾಣ ಮಂಡಳಿಯ ಮೂಲಕ ಈ ಕೆಲಸ-ಕಾರ್ಯಗಳು ನಡೆಯುತ್ತಿವೆ. ಆದರೆ ಪ್ರಸಕ್ತ ಸುರಿಯುತ್ತಿರುವ ಮಳೆಯಿಂದಾಗಿ ಇದಕ್ಕೆ ಒಂದಷ್ಟು ಅಡ್ಡಿಯಾಗುತ್ತಿದೆ.
ಮುಂದಿನ ಒಂದೆರಡು ತಿಂಗಳಲ್ಲಿ ಅಗತ್ಯ ಕೆಲಸ ಕಾರ್ಯಗಳು ಪೂರ್ಣಗೊಳ್ಳುವ ನಿರೀಕ್ಷೆಯಿದ್ದು, ಪ್ರಸ್ತುತ ಗ್ರಾಮಾಂತರ ಠಾಣೆ ಪ್ರದೇಶದ ಆವರಣದಲ್ಲಿರುವ ನಗರ ಠಾಣೆ ಹಿಂದೆ ಇದ್ದ ಜಾಗಕ್ಕೆ ಮರು ಸ್ಥಳಾಂತರಗೊಳ್ಳಲಿದೆ.