ಮಡಿಕೇರಿ, ನ. ೧೪: ಕೊಡಗು ಐರಿ ಸಮುದಾಯಗಳ ನಡುವೆ ನಡೆದ ಎಂಟನೇ ವರ್ಷದ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿಯಲ್ಲಿ ನಾಪೋಕ್ಲುವಿನ ತಟ್ಟಂಡ ಬೊಮ್ಮಂಜಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕೇತೋರಿ ಸ್ಟೆçöÊಕರ್ಸ್ ತಂಡ ರನ್ನರ್ ಅಪ್‌ಗೆ ತೃಪ್ತಿಪಟ್ಟುಕೊಂಡಿದೆ.
ಫೈನಲ್ ಪಂದ್ಯದಲ್ಲಿ ತಟ್ಟಂಡ ಬೊಮ್ಮಂಜಿ ತಂಡ, ಹಾಲೇರಿ ಗ್ರಾಮದ ಕೇತೋರಿ ಸ್ಟೆçöÊಕರ್ಸ್ ತಂಡವನ್ನು ೯ ವಿಕೆಟ್‌ಗಳಿಂದ ಮಣಿಸಿ ನೂತನ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಫೈನಲ್ ಪಂದ್ಯದಲ್ಲಿ ಹಾಲೇರಿ ತಂಡ ಗೆಲುವಿಗಾಗಿ ನಿಗದಿತ ಆರು ಓವರ್‌ಗಳಲ್ಲಿ ೪೨ ರನ್ ಗುರಿ ನೀಡಿತ್ತು. ಇದನ್ನು ಬೆನ್ನಟ್ಟಿದ ತಟ್ಟಂಡ ತಂಡ ಕೇವಲ
(ಮೊದಲ ಪುಟದಿಂದ) ಒಂದು ವಿಕೆಟ್ ಕಳೆದುಕೊಂಡು ೨.೩ ಓವರಗಳಲ್ಲೇ ಗುರಿ ಮುಟ್ಟಿ ವಿಜಯ ಸಾಧಿಸಿತು.
ಇದಕ್ಕೂ ಮೊದಲು ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬಲ್ಲಮಾವಟಿ ಹಾಗೂ ಐರೀರ ತಂಡವನ್ನು ತಟ್ಟಂಡ ಬೊಮ್ಮಂಜಿ ತಂಡ ೬ ವಿಕೆಟ್‌ಗಳಿಂದ ಮಣಿಸಿ ಫೈನಲ್ ಪ್ರವೇಶಿಸಿತು. ಮತ್ತೊಂದು ಸೆಮಿಫೈನಲ್ ಹಣಾಹಣಿಯಲ್ಲಿ ಹಾಲೇರಿ ಗ್ರಾಮದ ಕೇತೋರಿ ಸ್ಟೆçöÊಕರ್ಸ್ ತಂಡ ಇಬ್ಬನಿವಳವಾಡಿ ಗ್ರಾಮದ ಮಾಲೆರ ತಂಡವನ್ನು ೧೧ ರನ್‌ಗಳಿಂದ ಮಣಿಸಿ ಮೊದಲ ಬಾರಿಗೆ ಫೈನಲ್ ಪ್ರವೇಶಿಸಿತು. ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಬಲ್ಲಮಾವಟಿ ತಂಡ, ಮಾಲೆರ ತಂಡವನ್ನು ಮಣಿಸಿ ಸಮಾಧಾನಕರ ಪ್ರಶಸ್ತಿ ಪಡೆದುಕೊಂಡಿತು.
ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುನಿಲ್ ಸುಬ್ರಮಣಿ, ಜಡಿ ಮಳೆಯ ಮಧ್ಯೆಯೂ ಕ್ರಿಕೆಟ್ ಆಡಿ ಕ್ರೀಡಾ ಸ್ಪೂರ್ತಿ ಮೆರೆದ ಕ್ರೀಡಾಪಟುಗಳನ್ನು ಶ್ಲಾಘಿಸಿ, ಕ್ರೀಡೆ ಎನ್ನುವುದು ಕೊಡಗಿನವರ ರಕ್ತದಲ್ಲಿಯೇ ಇದೆ ಎಂದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಐರೀರ ಎ ಗೋಪಾಲ ಅವರು, ಕ್ರೀಡೆ ಎನ್ನುವುದು ಕೊಡಗಿನ ಸಂಸ್ಕೃತಿಯಾಗಿದೆ. ಹಾಗಾಗಿ ಅದನ್ನು ಎಲ್ಲರೂ ಉಳಿಸಿ ಬೆಳೆಸಬೇಕೆಂದು ಕರೆ ನೀಡಿದರು. ಕೊಡಗು ಐರಿ ಸಮಾಜದ ಅಧ್ಯಕ್ಷ ಮೇಲತ್ತಂಡ ರಮೇಶ್, ಉಪಾಧ್ಯಕ್ಷೆ ಬಬ್ಬೀರ ಸರಸ್ವತಿ, ಮುಲ್ಲೆöÊರೀರ ಕಪ್ ಕ್ರಿಕೆಟ್ ಕಮಿಟಿ ಅಧ್ಯಕ್ಷ ಮುಲ್ಲೆöÊರೀರ ಗೋಪಾಲ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಪಂದ್ಯಾವಳಿಯ ಅತ್ಯುತ್ತಮ ಬ್ಯಾಟ್ಸ್ಮನ್ ಆಗಿ ಬಲ್ಲಮಾವಟಿ ತಂಡದ ಐರೀರ ಚಂಗಪ್ಪ ಪ್ರಶಸ್ತಿ ಪಡೆದರೆ, ಸರಣಿಯ ಅತ್ಯುತ್ತಮ ಬೌಲರ್ ಆಗಿ ಮಾಲೆರೆ ಸಚಿನ್ ಪ್ರಶಸ್ತಿ ಮುಡಿಗೇರಿಸಿಕೊಂಡರು. ಸರಣಿ ಪುರುಷೋತ್ತಮ ಮತ್ತು ಫೈನಲ್ ಪಂದ್ಯದ ಪುರುಷೋತ್ತಮ ಪ್ರಶಸ್ತಿಯನ್ನು ಚಾಂಪಿಯನ್ ತಂಡದ ತಟ್ಟಂಡ ರೋಷನ್ ತನ್ನದಾಗಿಸಿಕೊಂಡರು. ಸರಣಿಯಲ್ಲಿ ಅತಿಹೆಚ್ಚು ಸಿಕ್ಸ್ ಹೊಡೆದ ಕೇತೋರಿ ಸ್ಪೆöÊಕರ್ಸ್ ತಂಡದ ವಿನಯ್‌ಗೆ ವಿಶೇಷ ಪ್ರಶಸ್ತಿ ನೀಡಲಾಯಿತು.