ಗೋಣಿಕೊಪ್ಪಲು, ನ. ೧೩: ಪೊನ್ನಂಪೇಟೆ, ಕಿರುಗೂರು, ಪೊನ್ನಪ್ಪಸಂತೆ ಸಂಪರ್ಕ ರಸ್ತೆಯ ಕಾಮಗಾರಿಗೆ ನಿರಂತರ ಮಳೆ ಅಡ್ಡಿಯಾಗಿದ್ದು ಕೆಲವೇ ಸಮಯದಲ್ಲಿ ರಸ್ತೆ ಕಾಮಗಾರಿಯು ಪುನರಾರಂಭ ಗೊಳ್ಳಲಿದೆ ಎಂದು ಕಿರುಗೂರು ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರಾದ ಚೆಪ್ಪುಡೀರ ವಿವೇಕ್ ಸ್ಪಷ್ಟನೆ ನೀಡಿದ್ದಾರೆ.

ಕಿರುಗೂರಿನ ಶಕ್ತಿ ಕೇಂದ್ರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷದ ಹಿಂದೆ ಪೊನ್ನಂಪೇಟೆ-ಕಿರುಗೂರು ರಸ್ತೆ ಅಭಿವೃದ್ಧಿಗೆ ಕ್ಷೇತ್ರದ ಶಾಸಕರು ಎರಡು ಕೋಟಿ ಅನುದಾನವನ್ನು ಬಿಡುಗಡೆ ಗೊಳಿಸಿದ್ದರು. ಕಳೆದ ಒಂದು ವರ್ಷದ ಹಿಂದೆ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ್ದರು. ಆದರೆ ಇತ್ತೀಚೆಗೆ ರಸ್ತೆ ವಿಚಾರದಲ್ಲಿ ಕೆಲವರು ಆರೋಪಿಸು ತ್ತಿರುವುದು ಕಂಡು ಬಂದಿದೆ. ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರಾಜಕೀಯ ಸಲ್ಲದು, ರಸ್ತೆ ಅಭಿವೃದ್ಧಿಗಾಗಿ ಈ ಭಾಗದ ಬಿಜೆಪಿ ಪಕ್ಷದ ಮುಖಂಡರು, ಕಾರ್ಯ ಕರ್ತರು, ಗ್ರಾಮಸ್ಥರು ಅಪಾರ ಶ್ರಮ ವಹಿಸಿದ್ದಾರೆ ಎಂದು ತಿಳಿಸಿದರು. ರಸ್ತೆ ವಿಚಾರವಾಗಿ ತೋಟದ ಮಾಲೀಕ ರೊಂದಿಗೆ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯ ಕರ್ತರು ನಿಕಟಸಂಪರ್ಕ ಸಾಧಿಸಿ ಮಾಲೀಕರನ್ನು ಮನವೊಲಿಸುವ ಮೂಲಕ ರಸ್ತೆಗೆ ಬೇಕಾದ ಜಾಗವನ್ನು ಬಿಡಿಸಲು ಶ್ರಮಪಟ್ಟಿದ್ದರು. ಕಾರ್ಯಕರ್ತರ ಮಾತಿಗೆ ಸ್ಪಂದನೆ ನೀಡಿದ ತೋಟದ ಮಾಲೀಕರು ರಸ್ತೆಗೆ ಬೇಕಾದ ಜಾಗವನ್ನು ಬಿಟ್ಟುಕೊಟ್ಟಿದ್ದರು. ಈ ಕಾರಣದಿಂದಾಗಿ ಕಾಮಗಾರಿ ವಿಳಂಬವಾಗಿದೆ ಎಂದು ವಿವೇಕ್ ವಿವರಣೆ ನೀಡಿದರು.

ಕಿರುಗೂರು ಬಿಜೆಪಿ ಕೃಷಿ ಮೋರ್ಚಾದ ಅಧ್ಯಕ್ಷ ಚೆಪ್ಪುಡೀರ ರಾಕೇಶ್ ದೇವಯ್ಯ ಮಾತನಾಡಿ, ಕಿರುಗೂರು ಪೊನ್ನಪ್ಪಸಂತೆ ಸಂಪರ್ಕ ರಸ್ತೆಯ ವಿಚಾರದಲ್ಲಿ ಇತ್ತೀಚೆಗೆ ಜನತೆಗೆ ತಪ್ಪು ಮಾಹಿತಿ ರವಾನೆ ಯಾಗುತ್ತಿದೆ. ವೆಟ್‌ಮಿಕ್ಸ್ ಹಾಕುವ ಮೂಲಕ ಕಾಮಗಾರಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಆದರೆ ಟೆಂಡರ್ ನಿಯಮದಂತೆ ಕಾಮಗಾರಿ ಪೂರೈಸಲಾಗಿದೆ. ಯಾವುದೇ ಅವ್ಯವಹಾರಗಳು ನಡೆಯಲು ಕಾರ್ಯಕರ್ತರು ಅವಕಾಶ ಕಲ್ಪಿಸಿಲ್ಲ ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಲಾಗಿದೆ.

ಮೇ ತಿಂಗಳ ಅಂತ್ಯದವರೆಗೂ ಕಾಮಗಾರಿಯೂ ನಿಯಮದಂತೆ ನಡೆಯುತಿತ್ತು. ನಂತರ ಎದುರಾದ ಕೋವಿಡ್ ಹಾಗೂ ಮಳೆಯಿಂದ ಕಾಮಗಾರಿಗೆ ಹಿನ್ನಡೆಯಾಯಿತು. ಮಳೆ, ಕೊರೊನಾದಿಂದ ರಸ್ತೆ ಕಾಮಗಾರಿ ವಿಳಂಬವಾಗುತ್ತಿರು ವುದನ್ನು ಮನಗಂಡು ಶಕ್ತಿ ಕೇಂದ್ರದ ಪದಾಧಿಕಾರಿಗಳು ಶಾಸಕರನ್ನು ಖುದ್ದು ಭೇಟಿ ಮಾಡಿದ ಸಂದರ್ಭ ಶಾಸಕರು ದೂರವಾಣಿ ಮೂಲಕ ಪಿಡಬ್ಲೂö್ಯಡಿ ಇಂಜಿನಿಯರ್‌ರವರಿಗೆ ಕಾಮಗಾರಿ ತ್ವರಿತಗತಿಯಲ್ಲಿ ನಡೆಸುವಂತೆ ತಿಳಿಸಿದ್ದರು. ೧೦ ದಿನಗಳ ಹಿಂದೆ ಕಾರ್ಯ ನಿರ್ವಾಹಕ ಇಂಜಿನಿಯರ್ ರವರನ್ನು ಶಕ್ತಿ ಕೇಂದ್ರದ ಪ್ರಮುಖರು ಭೇಟಿ ಮಾಡಿದ ವೇಳೆ ಸ್ಥಳಕ್ಕೆ ಗುತ್ತಿಗೆದಾರರನ್ನು ಕರೆಸಿ ಮಳೆನಿಂತ ೧೫ ದಿನದ ಒಳಗೆ ನಿಯಮದಂತೆ ರಸ್ತೆ ಕಾಮಗಾರಿಯನ್ನು ಪೂರ್ಣ ಗೊಳಿಸುವಂತೆ ಆದೇಶಿಸಿದರು. ಹಾಗೂ ಶಕ್ತಿ ಕೇಂದ್ರದ ಪದಾಧಿಕಾರಿ ಗಳಿಗೆ ಈ ಬಗ್ಗೆ ಭರವಸೆ ನೀಡಿದ್ದರು. ಈ ವಿಚಾರದಲ್ಲಿ ಯಾವುದೇ ಪ್ರಚಾರಕ್ಕೆ ಒತ್ತು ನೀಡಿರಲಿಲ್ಲ. ಇತ್ತೀಚೆಗೆ ಈ ರಸ್ತೆ ವಿಚಾರದಲ್ಲಿ ಅನಾವಶ್ಯಕ ರಾಜಕೀಯ ಕಂಡು ಬರುತ್ತಿರುವುದರಿಂದ ಅನಿವಾರ್ಯವಾಗಿ ಸ್ಪಷ್ಟನೆ ನೀಡುವ ಪ್ರಸಂಗ ಎದುರಾಗಿದೆ ಎಂದರು.

ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ರಸ್ತೆಯ ಮುಂದುವರೆದ ಕಾಮಗಾರಿ ಗಾಗಿ ಹೆಚ್ಚುವರಿ ೧.೭೫ ಕೋಟಿ ಹಣವನ್ನು ಮಂಜೂರು ಮಾಡಿದ್ದಾರೆ. ಕೆಲವೆ ಸಮಯದಲ್ಲಿ ಈ ಕಾಮಗಾರಿಯೂ ಕೂಡ ಆರಂಭಗೊಳ್ಳಲಿದೆ. ರಸ್ತೆಯ ಅಗಲೀಕರಣ ವಿಚಾರದಲ್ಲಿ ಪಕ್ಷದ ಕಾರ್ಯಕರ್ತರು, ನಾಗರಿಕರು ಹಾಗೂ ಗ್ರಾಮಸ್ಥರೊಂದಿಗೆ ಸಮನ್ವಯ ಸಾಧಿಸಿದ ತರುವಾಯ ರಸ್ತೆ ಅಗಲೀಕರಣಕ್ಕೆ ಅನುಕೂಲವಾಯಿತು. ಲೋಕೋಪಯೋಗಿ ಇಲಾಖೆಯ ಕಿರಿಯ ಹಾಗೂ ಹಿರಿಯ ಅಧಿಕಾರಿಗಳು ವರ್ಗಾವಣೆ ಗೊಂಡ ಹಿನ್ನಲೆಯಲ್ಲಿ ಕಾಮಗಾರಿಗೆ ಕೊಂಚ ಹಿನ್ನಡೆಯಾಗಿತ್ತು. ಇದೀಗ ಮಳೆ ಕಡಿಮೆಯಾಗುತ್ತಿದ್ದಂತೆಯೇ ಕಾಮಗಾರಿಯೂ ಮುಂದುವರೆಯ ಲಿದೆ ಸಾರ್ವಜನಿಕರು ಸಹಕರಿಸುವಂತೆ ಚೆಪ್ಪುಡೀರ ರಾಕೇಶ್ ದೇವಯ್ಯ ತಿಳಿಸಿದ್ದಾರೆ.

ಬಿಜೆಪಿ ಮಹಾಶಕ್ತಿ ಕೇಂದ್ರದ ಸಂಚಾಲಕ ಆಲೇಮಾಡ ಸುಧೀರ್ ಮಾತನಾಡಿ, ರಸ್ತೆ ಅಭಿವೃದ್ಧಿಗೆ ಸಂಬAಧಿಸಿದAತೆ ಗುತ್ತಿಗೆದಾರರು ವಿಳಂಬ ಧೋರಣೆ ಮಾಡಿದ ಸಂದರ್ಭ ಶಾಸಕರ ಸಮ್ಮುಖದಲ್ಲಿ ಈ ಬಗ್ಗೆ ಸ್ಪಷ್ಪ ಸೂಚನೆ ನೀಡಿ ಕಾಮಗಾರಿ ನಿಗದಿತ ಸಮಯದಲ್ಲಿ ಪೂರೈಸುವಂತೆ ಸೂಚನೆ ನೀಡಿದ್ದರು. ತದನಂತರ ಮಳೆಯ ಅಡ್ಡಿಯಿಂದ ಕೆಲಸ ನಿರ್ವಹಿಸಲು ಹಿನ್ನಡೆಯಾಯಿತು ಎಂದರು. ಈ ವಿಚಾರದಲ್ಲಿ ಪಕ್ಷದ ಪದಾಧಿಕಾರಿಗಳು ಶಾಸಕರೊಂದಿಗೆ ಹಾಗೂ ವಿವಿಧ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಕಾಮಗಾರಿ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ಕಿರುಗೂರು ಬೂತ್ ಅಧ್ಯಕ್ಷ ಚೆರಿಯಪಂಡ ಕೀರ್ತನ್, ಮತ್ತೂರು ಬೂತ್ ಅಧ್ಯಕ್ಷ ಪುತ್ತಮನೆ ಜೀವನ್, ಬಿಜೆಪಿ ಸ್ಥಾನೀಯ ಸಮಿತಿ ಮಾಜಿ ಅಧ್ಯಕ್ಷ ಪಿ.ಎಸ್. ಮಂಜುನಾಥ್, ತಾಲೂಕು ಯುವ ಮೋರ್ಚಾ ಕಾರ್ಯದರ್ಶಿ ಚೆರಿಯಪಂಡ ದೀಪಕ್ ಸುಬ್ಬಯ್ಯ, ಪೆಮ್ಮಂಡ ಮಧು ಹಾಗೂ ಪಕ್ಷದ ವಿವಿಧ ಘಟಕದ ಪದಾಧಿಕಾರಿಗಳು ಹಾಜರಿದ್ದರು.

- ಹೆಚ್.ಕೆ. ಜಗದೀಶ್