ಮಡಿಕೇರಿ, ನ. ೧೩: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗದ ನಡುವೆ ನಡೆದ ಕುಟುಂಬ-೨೦೨೧ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಕೊಡಗು ಗೌಡ ಸಮಾಜದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮ ದಲ್ಲಿ ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗಾಗಿ ಕರ್ಣಯ್ಯನ ಈಶ್ವರ, ಬಳಪದ ವರುಣ್, ಕೀಜನ ಯತೀಶ್, ನಗರಸಭಾ ಸದಸ್ಯರುಗಳಾಗಿ ಆಯ್ಕೆಯಾದ ಮಹೇಶ್ ಜೈನಿ, ಕುಟ್ಟನ ಶ್ವೇತಾ ಪ್ರಶಾಂತ್ ಹಾಗೂ ಗೌಡ ಜನಾಂಗದ ಸಂಘಟನೆಗಾಗಿ ಶ್ರಮಿಸಿದ ಕೊಡಗು ಗೌಡ ಸಾಂಸ್ಕೃತಿಕ ಅಕಾಡೆಮಿ ಸ್ಥಾಪಕರಾದ ತುಂತಜೆ ಗಣೇಶ್ ಅವರುಗಳನ್ನು ಸನ್ಮಾನಿಸಲಾಯಿತು.