ಸೋಮವಾರಪೇಟೆ, ನ. ೧೩. ಶನಿವಾರಸಂತೆ ಸಮೀಪದ ಗುಡುಗಳಲೆ ಜಾತ್ರಾ ಮೈದಾನ ಸಮೀಪ ಕಳೆದ ತಾ.೭ರಂದು ನಡೆದ ಹಲ್ಲೆ ಪ್ರಕರಣಕ್ಕೆ ಸಂಬAಧಿಸಿದAತೆ ಶನಿವಾರಸಂತೆ ವ್ಯಾಪ್ತಿಯ ಹಿಂದೂಪರ ಸಂಘಟನೆಗಳು ತಾ. ೧೫ರಂದು (ನಾಳೆ) ಶನಿವಾರಸಂತೆ ಪಟ್ಟಣ ಬಂದ್ಗೆ ಕರೆಕೊಟ್ಟಿವೆ.
ಶನಿವಾರಸಂತೆಯಲ್ಲಿ ಇಂದು ಸಭೆ ನಡೆಸಿದ ವಿವಿಧ ಸಂಘಟನೆಗಳ ಪ್ರಮುಖರು ಈ ತೀರ್ಮಾನ ಕೈಗೊಂಡಿದ್ದು, ನ್ಯಾಯಕ್ಕಾಗಿ ಆಗ್ರಹಿಸಿ ಬಂದ್ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ತಾ.೭ ರಂದು ಗುಡುಗಳಲೆ ಬಳಿಯಲ್ಲಿ ಅನ್ಯಕೋಮಿನ ಯುವಕರ ಗುಂಪೊAದು ಹಿಂದೂ ಯುವಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದೆ. ಈ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ನ್ಯಾಯಯುತವಾಗಿ ಮೊಕದ್ದಮೆ ದಾಖಲಿಸಿಕೊಂಡಿಲ್ಲ. ಎಲ್ಲಾ ಆರೋಪಿಗಳನ್ನು ಬಂಧಿಸಿಲ್ಲ ಎಂದು ಸಂಘಟನೆಯ ಪ್ರಮುಖರು ಆರೋಪಿಸಿದ್ದಾರೆ. ಪ್ರಕರಣಕ್ಕೆ ಸಂಬAಧಿಸಿದAತೆ ಓರ್ವ ಆರೋಪಿಯನ್ನು ಮಾತ್ರ ಪೊಲೀಸರು ಬಂಧಿಸಿದ್ದಾರೆ. ಉಳಿದ ಆರೋಪಿಗಳು ರಾಜಾರೋಷವಾಗಿ ಓಡಾಡಿಕೊಂಡಿದ್ದಾರೆ. ಶನಿವಾರಸಂತೆ ಪೊಲೀಸ್ ಠಾಣೆಯ ಕಾರ್ಯನಿರ್ವಹಣೆ ಬಗ್ಗೆ ಸಂಶಯ ಮೂಡುವಂತಾಗಿದೆ ಎಂದು ಸಂಘಟನೆಯ ಪ್ರಮುಖರು ಆಕ್ಷೇಪಿಸಿದ್ದಾರೆ.
(ಮೊದಲ ಪುಟದಿಂದ) ಶನಿವಾರಸಂತೆ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಗಂಭೀರವಾಗಿ ಕೆಲಸ ಮಾಡಬೇಕು ಎಂದು ಒತ್ತಾಯಿಸಿರುವ ಪ್ರಮುಖರು, ಕೊಲೆ ಯತ್ನ ಪ್ರಕರಣದ ಆರೋಪಿಗಳ ಪರವಾಗಿಯೆ ಕಪೋಲ ಕಲ್ಪಿತವಾಗಿ ಸುಳ್ಳು ದೂರು ನೀಡಿರುವ ಮಹಿಳೆಯ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ತಾ.೭ರಂದು ಗುಡುಗಳಲೆ ಸಮೀಪ ಪರಿಶಿಷ್ಟ ಜಾತಿಯ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರೂ ಸಹ ಶನಿವಾರಸಂತೆ ಪೊಲೀಸರು ದಲಿತ ದೌರ್ಜನ್ಯ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿಕೊಳ್ಳದೇ ಇರುವುದು ಹಲವಷ್ಟು ಸಂಶಯಗಳಿಗೆ ಎಡೆಮಾಡಿದೆ. ಈ ಬಗ್ಗೆ ಪೊಲೀಸರ ವಿರುದ್ಧ ಗೃಹ ಸಚಿವರಿಗೆ ದೂರುನೀಡಲಾಗುವುದು. ಅದಕ್ಕೂ ಮೊದಲು ನ್ಯಾಯಕ್ಕೆ ಆಗ್ರಹಿಸಿ ತಾ. ೧೫ರಂದು ಶನಿವಾರಸಂತೆ ಪಟ್ಟಣ ಬಂದ್ಗೆ ಕರೆ ನೀಡಲಾಗಿದೆ. ಅಂದು ಶನಿವಾರಸಂತೆ ಸಂಪೂರ್ಣ ಬಂದ್ ಆಗಲಿದೆ ಎಂದು ಪ್ರಮುಖರಾದ ರಘು, ಹರೀಶ್, ಜಾಗೇನಹಳ್ಳಿ ಸುರೇಶ್, ತಾಳೂರು ಪುನೀತ್, ಧನಂಜಯ್, ಅಶೋಕ್ ಸೇರಿದಂತೆ ಇತರರು ತಿಳಿಸಿದ್ದಾರೆ.