ಮಡಿಕೇರಿ, ನ. ೧೩: ವಿದ್ಯುತ್ ಸಮಸ್ಯೆ ಸರಿಪಡಿಸಿ ಗುಣಮಟ್ಟ ಹೆಚ್ಚಿಸುವ ಸಲುವಾಗಿ ಕೆಪಿಟಿಸಿಎಲ್ ಯೋಜನೆ ರೂಪಿಸಿದ್ದು, ಈ ಸಂಬAಧ ರೈತರ ಹಾಗೂ ಭೂಮಾಲೀಕರ ಜಾಗ ಸ್ವಾಧೀನ ಹಾಗೂ ಪರಿಹಾರ ನಿರ್ಧರಿಸುವ ನಿಟ್ಟಿನಲ್ಲಿ ತಾ. ೧೬ ರಂದು ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಮಹತ್ವದ ಸಭೆ ನಡೆಯಲಿದೆ.

ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಸಿ ವಿದ್ಯುತ್ ಸರಬರಾಜು ಮಾಡುವ ಸಂಬAಧ ೬೬ ಕೆ.ವಿ. ವಿದ್ಯುತ್ ಪ್ರಸರಣ ಮಾರ್ಗವನ್ನು ಹಾಲಿ ಮಡಿಕೇರಿ ೬೬/೧೧ ಕೆ.ವಿ. ವಿದ್ಯುತ್ ವಿತರಣಾ ಕೇಂದ್ರದಿAದ ವೀರಾಜಪೇಟೆ ತಾಲೂಕಿನ ಹಾಲಿ ೬೬/೩೩/೧೧ಕೆವಿ ವೀರಾಜಪೇಟೆ ವಿವಿ ಕೇಂದ್ರದವರೆಗೆ ೩೧.೩೮ ಕಿ.ಮೀ. ಉದ್ದದ ೬೬ ಕೆ.ವಿ. ವೀರಾಜಪೇಟೆ-ಮಡಿಕೇರಿ ಪ್ರಸರಣ ಮಾರ್ಗವನ್ನು ದ್ವಿಮುಖ ಗೋಪುರದಲ್ಲಿ ಏಕಮುಖ ಮಾರ್ಗ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.

೬೬ ಕೆ.ವಿ. ವಿದ್ಯುತ್ ಮಾರ್ಗ ಮಡಿಕೇರಿ ತಾಲೂಕಿನ ಎಂ. ಬಾಡಗ, ಕಾಂತೂರು, ಹಾಕತ್ತೂರು, ಬಿಳಿಗೇರಿ, ಕಗ್ಗೋಡ್ಲು, ಮೇಕೇರಿ, ಕಡಗದಾಳು, ಇಬ್ನಿವಳವಾಡಿ, ಕರ್ಣಂಗೇರಿ ಗ್ರಾಮ ಹಾಗೂ ಮಡಿಕೇರಿ ಮೂಲಕ ಹಾದು ಹೋಗಲಿದೆ. ಈ ಜಾಗದ ಸ್ವಾಧೀನ ಹಾಗೂ ಪರಿಹಾರ ನೀಡುವ ವಿಚಾರಕ್ಕೆ ಸಂಬAಧಿಸಿದAತೆ ಈ ವ್ಯಾಪ್ತಿಯ ರೈತರ, ಭೂಮಾಲೀಕರ ಸಭೆ ತಾ. ೧೬ ರಂದು ಮಧ್ಯಾಹ್ನ ೩.೩೦ ಕ್ಕೆ ನಡೆಯಲಿದೆ.