ಮಡಿಕೇರಿ, ನ.೧೩; ಮನೆ ನಿರ್ಮಾಣ ಸ್ಥಳದಿಂದ ಕಾಂಕ್ರಿಟ್ ಮಿಶ್ರಣ ಯಂತ್ರ ಕಳವು ಮಾಡಿದ ಪ್ರಕರಣಕ್ಕೆ ಸಂಬAಧಿಸಿದAತೆ ಕೊಡಗು ಜಿಲ್ಲಾ ಅಪರಾಧ ಪತ್ತೆದಳದವರು ಈರ್ವರು ಕಳ್ಳರನ್ನು ಬಂಧಿಸಿದ್ದಾರೆ.

ಮಡಿಕೇರಿ ನಗರದ ಮ್ಯಾನ್ಸ್ ಕಾಂಪೌAಡ್ ಸಮೀಪದಲ್ಲಿ ನೂತನವಾಗಿ ಮನೆ ನಿರ್ಮಾಣ ವಾಗುತ್ತಿರುವ ಸ್ಥಳದಲ್ಲಿದ್ದ ಜಾಗದಿಂದ ಕಾಂಕ್ರಿಟ್ ಮಿಶ್ರಣ ಮಾಡುವ ಯಂತ್ರವನ್ನು ಕಳವು ಮಾಡಿರುವ ಬಗ್ಗೆ ಗುತ್ತಿಗೆದಾರರು ಮಡಿಕೇರಿ ನಗರ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ಅಪರಾಧ ಪತ್ತೆ ದಳಕ್ಕೆ ವರ್ಗಾಯಿಸಲಾಗಿತ್ತು. ಈ ಸಂಬAಧ ತನಿಖೆ ಮುಂದುವರಿಸಿದ ಅಪರಾಧ ಪತ್ತೆ ದಳದವರು ಮಾಹಿತಿ ಕಲೆ ಹಾಕಿ ಮಡಿಕೇರಿಯ ಶಾಸ್ತಿç ನಗರದ ಎಂ.ಹೆಚ್.ಇಮ್ರಾನ್ ಹಾಗೂ ಗಣಪತಿ ಬೀದಿಯ ಆರ್.ಪ್ರಮೋದ್‌ರಾಜ್ ಎಂಬಿಬ್ಬರನ್ನು ಬಂಧಿಸಿದ್ದಾರೆ. ಬಂಧಿತರಿAದ ರೂ.ಒಂದು ಲಕ್ಷ ಬೆಲೆ ಬಾಳುವ ಕಾಂಕ್ರಿಟ್ ಮಿಶ್ರಣ ಯಂತ್ರ ಹಾಗೂ ರೂ.ಎರಡು ಲಕ್ಷ ಮೌಲ್ಯದ ಕಾರನ್ನು ವಶ ಪಡಿಸಿಕೊಂಡಿದ್ದಾರೆ.

ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್‌ಪಿ ಗಜೇಂದ್ರ ಪ್ರಸಾದ್, ಅಪರಾಧ ಗುಪ್ತಚರ ದಳದ ನಿರೀಕ್ಷಕ ಐ.ಪಿ.ಮೇದಪ್ಪ ಅವರುಗಳ ನಿರ್ದೇಶನದಲ್ಲಿ ನಡೆದ ಕಾರ್ಯಾ ಚರಣೆಯಲ್ಲಿ ಅಪರಾಧ ಪತ್ತೆ ದಳದ ಸಹಾಯಕ ಠಾಣಾಧಿಕಾರಿ ಹಮೀದ್, ಸಿಬ್ಬಂದಿಗಳಾದ ನಿರಂಜನ್, ಯೋಗೇಶ್ ಕುಮಾರ್, ವೆಂಕಟೇಶ್, ವಸಂತ, ಸುರೇಶ್, ಶರತ್ ರೈ, ಅನಿಲ್ ಕುಮಾರ್, ಚಾಲಕ ಶಶಿಕುಮಾರ್ ಭಾಗವಹಿಸಿದ್ದರು.

? ಸಂತೋಷ್