ಮಡಿಕೇರಿ, ನ. ೧೩: ೬೬ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪೊನ್ನಂಪೇಟೆಯ ಕೂರ್ಗ್ ಇನ್ಸಿ÷್ಟಟ್ಯೂಟ್ ಆಫ್ ಪಿ.ಯು. ಕಾಲೇಜಿನಲ್ಲಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಇತ್ತೀಚೆಗೆ ಆಯೋಜಿಸಲಾಗಿತ್ತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಗೋಣಿಕೊಪ್ಪ ಕಾವೇರಿ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಂ.ಬಿ. ಕಾವೇರಪ್ಪ ಪಾಲ್ಗೊಂಡಿದ್ದರು. ಕನ್ನಡ ಭಾಷೆ ಮತ್ತು ಸಾಹಿತ್ಯದ ಉಗಮ, ನಾಡು, ನುಡಿ, ಸಂಸ್ಕೃತಿಯ, ಪರಂಪರೆ, ಚರಿತ್ರೆಯನ್ನು ತಿಳಿಸುತ್ತ ಕನ್ನಡ ಭಾಷೆಯನ್ನು ಪ್ರೀತಿಸಿ, ಇತರ ಭಾಷೆಯನ್ನು ಗೌರವಿಸಿ ಎಂದು ನುಡಿದರು. ಅನ್ಯ ಭಾಷಿಗರೊಂದಿಗೆ ಕನ್ನಡದಲ್ಲಿಯೇ ವ್ಯವಹರಿಸಿ, ಅವರು ನಮ್ಮ ಕನ್ನಡ ಭಾಷೆ ಕಲಿಯುವಂತೆ ಪ್ರೇರೇಪಣೆ ನೀಡಿ, ಕನ್ನಡ ನಮ್ಮ ಸ್ವಾಭಿಮಾನದ ಪ್ರತೀಕವಾಗಿದೆ. ಆ ನಿಟ್ಟಿನಲ್ಲಿ ಸಂಕಲ್ಪ ಮಾಡಿ, ಕಾರ್ಯೋ ನ್ಮುಖವಾಗಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಸಿ.ಐ.ಟಿ. ಕಾಲೇಜಿನ ಕ್ಯಾಂಪಸ್ ಆಡ್ಮಿನಿಸ್ಟೆçÃಟರ್ ಜೀವನ್ ಚಿಣ್ಣಪ್ಪ ಕಾರ್ಯಕ್ರಮವನ್ನು ಉದ್ದೇಶಿಸಿ ವಿಶ್ವದ ಪ್ರಾಚೀನ ಭಾಷೆಗಳಲ್ಲಿ ಒಂದಾದ ಕನ್ನಡ ಭಾಷೆ ಶಾಸ್ತಿçÃಯ ಸ್ಥಾನಮಾನ ಹೊಂದಿದೆ ಮತ್ತು ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಹೊಂದಿರುವ ಶ್ರೀಮಂತ ಭಾಷೆಯಾಗಿದೆ ಎಂದರು.

ಸಿ.ಐ.ಪಿ.ಯು.ಸಿ.ಯ ಪ್ರಾಂಶುಪಾಲೆ ಡಾ. ರೋಹಿಣಿ ತಿಮ್ಮಯ್ಯ ಅಧ್ಯಕ್ಷರ ನುಡಿಗಳಾನ್ನಡುತ್ತ ಮಾತೃ ಭಾಷೆಗೆ ಮೊದಲ ಆದ್ಯತೆ ನೀಡುವ ಮೂಲಕ ಭಾಷೆಯ ಉಳಿಸುವ, ಬೆಳೆಸುವ ಜವಾಬ್ದಾರಿ ಯುವ ಜನತೆಯ ಮೇಲಿದೆ, ಆ ನಿಟ್ಟಿನಲ್ಲಿ ಕೀಳರಿಮೆ ಬಿಟ್ಟು, ಮಾತೃ ಭಾಷೆಯನ್ನು ಮಾತನಾಡುವಂತೆ ಹೇಳಿದರು.

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಜಾನಪದ ಸಂಭ್ರಮ ಮತ್ತು ಭಾವಲಹರಿ ಎಂಬ ಗೀತಗಾಯನ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಜಾನಪದ ವೈಯಕ್ತಿಕ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಭರತ್ ಕುಮಾರ್ ಬಿ.ಡಿ., ದ್ವಿತೀಯ ಬಹುಮಾನವನ್ನು ವರುಣ್ ಎನ್.ಪಿ. ಹಾಗೂ ತೃತೀಯ ಬಹುಮಾನವನ್ನು ಶಿವಾನಿ ಗಳಿಸಿದರು.

ಭಾವಗೀತೆ ಸ್ಪರ್ಧೆಯಲ್ಲಿ ಭರತ್ ಕುಮಾರ್ ಬಿ.ಡಿ. ಪ್ರಥಮ ಸ್ಥಾನ, ದ್ವಿತೀಯ ಸ್ಥಾನವನ್ನು ವರುಣ್ ಎನ್.ಪಿ. ತಮ್ಮದಾಗಿಸಿಕೊಂಡರು. ಜಾನಪದ ಸಮೂಹ ಗೀತೆ ಸ್ಪರ್ಧೆಯಲ್ಲಿ ತಾನ್ಯ ಮತ್ತು ತಂಡ ಪ್ರಥಮ ಬಹುಮಾನ, ದ್ವಿತೀಯ ಬಹುಮಾನವನ್ನು ವರುಣ್ ಮತ್ತು ತಂಡ ದವರು, ತೃತೀಯ ಬಹುಮಾನವನ್ನು ಸಿಂಚನ ಮತ್ತು ತಂಡದವರು ಗಳಿಸಿದರು. ಸಿ.ಐ.ಪಿ.ಯು.ಸಿ.ಯ ಕನ್ನಡ ಉಪನ್ಯಾಸಕಿ ಸುಶ್ಮಿತ ಪಿ.ವಿ. ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿಗಳಾದ ಗಾನವಿ ಬೋಪಣ್ಣ ಮತ್ತು ಭರತ್ ಕುಮಾರ್ ನಿರ್ವಹಿಸಿದರು. ಬಹುಮಾನಿತ ಪಟ್ಟಿಯನ್ನು ದ್ವಿತೀಯ ಪಿ.ಯು. ವಿದ್ಯಾರ್ಥಿನಿ ಲಿಪಿಕಾ ವಾಚಿಸಿದರು. ದ್ವಿತೀಯ ಪಿ.ಯು. ವಿದ್ಯಾರ್ಥಿನಿ ಗಾಯನ ವಂದಿಸಿದರು.

ಸಿ.ಐ.ಪಿ.ಯು.ಸಿ.ಯ ಪ್ರಾಂಶುಪಾಲೆ ಡಾ. ರೋಹಿಣಿ ತಿಮ್ಮಯ್ಯ, ಸಿ.ಐ.ಟಿ. ಕಾಲೇಜಿನ ಪ್ರಾಂಶುಪಾಲ ಡಾ. ಎಂ. ಬಸವರಾಜು ಮತ್ತು ಕ್ಯಾಂಪಸ್ ಆಡ್ಮಿನಿಸ್ಟೆçÃಟರ್ ಜೀವನ್ ಚಿಣ್ಣಪ್ಪ, ಭೌತಶಾಸ್ತç ವಿಭಾಗದ ಮುಖ್ಯಸ್ಥ ಪ್ರೊ. ಅನುರಾಧ, ಗಣಿತ ಶಾಸ್ತç ಉಪನ್ಯಾಸಕಿ ಲತಾ ಕುಮಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.