ಗೋಣಿಕೊಪ್ಪ ವರದಿ, ನ. ೧೩: ಕೇಂದ್ರ ಸಸ್ಯ ತಳಿಗಳ ಸಂರಕ್ಷಣೆ ಮತ್ತು ರೈತ ಹಕ್ಕು ಕಾಯ್ದೆ ಅಥಾರಿಟಿ ವತಿಯಿಂದ ನವದೆಹಲಿಯ ಎ.ಪಿ. ಶೀಂಧೆ ಸಿಂಪೋಸಿಯಮ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆದಿ ಕರಿಮೆಣಸು ತಳಿ ಸಂರಕ್ಷಕ ಗರ್ವಾಲೆ ಗ್ರಾಮದ ನಾಪಂಡ ಎನ್. ಪೂಣಚ್ಚ ತಳಿ ಸಂರಕ್ಷಕ ಪ್ರಶಸ್ತಿ ಸ್ವೀಕರಿಸಿದರು.
ಕೇಂದ್ರ ಕೃಷಿ ಸಚಿವ ನರೇಂದ್ರಸಿAಗ್ ಥೋಮರ್, ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಪ್ರದಾನ ಮಾಡಿದರು. ಸಸ್ಯ ತಳಿಗಳ ಸಂರಕ್ಷಣೆ ಮತ್ತು ರೈತ ಹಕ್ಕು ಕಾಯ್ದೆ ಅಥಾರಿಟಿ ಮುಖ್ಯಸ್ಥ ಕೆ.ವಿ ಪ್ರಭು, ಪೂಣಚ್ಚ ಅವರ ಪತ್ನಿ ರತಿ ಪೂಣಚ್ಚ ಇದ್ದರು.
ಕಾಡಿನಲ್ಲಿ ದೊರೆತ ಆದಿ ಕರಿಮೆಣಸು ತಳಿಯನ್ನು ಸಂರಕ್ಷಿಸಿದ ಹಿನ್ನೆಲೆ ನಾಪಂಡ ಎನ್. ಪೂಣಚ್ಚ ಅವರನ್ನು ಕೇಂದ್ರ ಸರ್ಕಾರ ಗುರುತಿಸಿದೆ. ಒಂದು ತಳಿಯಿಂದ ೧೦ ವಿವಿಧ ವಿಶೇಷ ಗುಣಗಳ ತಳಿಯನ್ನು ಸಂಶೋಧನೆ ಮಾಡಿದ್ದಾರೆ. ಹೂವಿನ ಉದ್ದ, ಕಾಳಿನ ಗಾತ್ರ, ಕಾಳಿನ ಸಂಖ್ಯೆ ಹೀಗೆ ವಿಶೇಷತೆಯೊಂದಿಗೆ ಈಗಾಗಲೇ ೧೦ ತಳಿ ಅಭಿವೃದ್ಧಿ ಪಡಿಸಿದ್ದಾರೆ. ಇಂಡಿಯನ್ ಇನ್ಸಿ÷್ಟಟ್ಯೂಟ್ ಆಫ್ ಸ್ಪೆöÊಸಸ್ ರಿಸರ್ಚ್ ವತಿಯಿಂದ ತಳಿ ಪೇಟೆಂಟ್ ನೋಂದಣಿಯಾಗಿದ್ದು, ಔಷಧೀಯ ಗುಣ, ಗಾತ್ರ, ಪ್ರಯೋಜನ ಮತ್ತು ಕೇವಲ ಮಳೆ ಬೀಳುವ ಪ್ರದೇಶದಲ್ಲಿ ಬೆಳೆಯುವುದರಿಂದ ವಿಶೇಷ ತಳಿ ಎಂದು ಪ್ರಮಾಣೀಕರಿಸಲಾಗಿದೆ. ೨೦ ವರ್ಷಗಳ ಸಂಶೋಧನೆಗೆ ಫಲ ಸಿಕ್ಕಿದಂತಾಗಿದೆ. ಕೇಂದ್ರ ಸರ್ಕಾರದ ಸಸ್ಯ ತಳಿಗಳ ಸಂರಕ್ಷಣೆ ಮತ್ತು ರೈತ ಹಕ್ಕು ಕಾಯ್ದೆ ಅಥಾರಿಟಿ ಮೂಲಕ ತಳಿ ಸಂರಕ್ಷಕ ಪ್ರಶಸ್ತಿ ನೀಡಿದೆ.