ಗೋಣಿಕೊಪ್ಪ ವರದಿ, ನ. ೧೨: ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ಕಾಲ್ಸ್ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಚಾಂಪಿಯನ್‌ಶಿಪ್ ಟೂರ್ನಿಯಲ್ಲಿ ಪೊನ್ನಂಪೇಟೆ ಸಂತ ಅಂತೋಣಿ ಶಾಲೆಗೆ ೯ ಬಹುಮಾನ ಲಭಿಸಿದೆ.

ಬಾಲಕರ ಡಿಸ್ಕಸ್ ಎಸೆತದಲ್ಲಿ ಎಂ.ಎಸ್. ಪ್ರಜ್ವಲ್ (ದ್ವಿ), ಎ.ಎಸ್. ಸಾಹಿಲ್ (ತೃ), ಬಾಲಕಿಯರಲ್ಲಿ ನಿಶಾ ನೀಲಮ್ಮ (ದ್ವಿ), ತುಳಸಿ (ತೃ), ಜಾವೆಲಿನ್ ಎಸೆತದಲ್ಲಿ ಎ.ಎಸ್. ಸಾಹಿಲ್ (ದ್ವಿ), ಹೈಜಂಪ್‌ನಲ್ಲಿ ಎ.ಎಂ. ಶಿವನ್ (ದ್ವಿ), ೬೦೦ ಮೀ. ಓಟದಲ್ಲಿ ಎಂ. ನಿಶಾಂತ್ (ದ್ವಿ), ತಮ್ಷ್ ತಮ್ಮಯ್ಯ (ತೃ), ಬಾಲಕಿಯರ ಭಾರದ ಗುಂಡು ಎಸೆತದಲ್ಲಿ ಡಿ.ಎಸ್. ನಿಶಾ ನೀಲಮ್ಮ ದ್ವಿತೀಯ ಸ್ಥಾನ ಪಡೆದಿದ್ದಾರೆ. ವಿಜೇತ ವಿದ್ಯಾರ್ಥಿಗಳನ್ನು ಶಾಲೆಯಲ್ಲಿ ಗೌರವಿಸಲಾಯಿತು. ಈ ಸಂದರ್ಭ ಸಂತ ಅಂತೋಣಿ ಸಂಸ್ಥೆ ಮುಖ್ಯಸ್ಥ ಫಾದರ್ ಡೇವಿಡ್ ಸಾಗಯ್, ಪ್ರಾಂಶುಪಾಲ ಎಸ್.ಎಂ. ಚಂದ್ರಿಕ, ಸಹ ಮುಖ್ಯಶಿಕ್ಷಕಿ ರಜನಿ, ದೈಹಿಕ ಶಿಕ್ಷಣ ಶಿಕ್ಷಕ ಮಹೇಶ್ ಉತ್ತಪ್ಪ ಇದ್ದರು.