ಸಿದ್ದಾಪುರ, ನ. ೧೨: ಗುಹ್ಯ ಅಗಸ್ತೆö್ಯÃಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ರೂ. ೧ ಕೋಟಿಗೂ ಅಧಿಕ ನಿವ್ವಳ ಲಾಭಗಳಿಸಿದೆ ಎಂದು ಗುಹ್ಯ ಅಗಸ್ತೆö್ಯÃಶ್ವರ ಸಹಕಾರ ಸಂಘದ ಅಧ್ಯಕ್ಷ ಎಂ.ಎಸ್. ವೆಂಕಟೇಶ್ ತಿಳಿಸಿದರು.
ಸಿದ್ದಾಪುರದ ಎಂ.ಜಿ. ರಸ್ತೆಯಲ್ಲಿರುವ ಸಹಕಾರ ಸಂಘದ ಸಭಾಂಗಣದಲ್ಲಿ ೨೦೨೦-೨೧ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಘದಲ್ಲಿ ಪಾಲು ಬಂಡವಾಳ ರೂ. ೧೮೦.೩೫ ಲಕ್ಷಗಳಿದ್ದು ಠೇವಣಿಗಳು ರೂ. ೩೨.೨೯ ಕೋಟಿ ಇರುತ್ತದೆ. ಪ್ರಸಕ್ತ ವರ್ಷ ರೂ. ೧ ಕೋಟಿ ೨೨ ಸಾವಿರ ನಿವ್ವಳ ಲಾಭ ಬಂದಿದೆ. ಈ ಹಿನ್ನೆಲೆ ಸಂಘದ ಸದಸ್ಯರಿಗೆ ಶೇ. ೨೨ ಡಿವಿಡೆಂಟ್ ನೀಡಲಾಗಿದೆ ಎಂದರು. ಸಂಘದ ವತಿಯಿಂದ ನಡೆಸುತ್ತಿರುವ ಪೆಟ್ರೋಲ್-ಡೀಸೆಲ್ ವ್ಯಾಪಾರದಲ್ಲಿ ರೂ. ೧೬.೬೧ ಕೋಟಿ ವ್ಯವಹಾರ ನಡೆಸಲಾಗಿದೆ. ಸಂಘದ ವತಿಯಿಂದ ಮುಂದಿನ ದಿನಗಳಲ್ಲಿ ಗದ್ದೆ ಕೃಷಿ ಮಾಡುವ ಕೃಷಿಕರಿಗೆ ಭತ್ತ ಬೆಳೆಸಲು ಸಹಕಾರ ನೀಡಲಾಗುವುದು. ಸಂಘದ ವತಿಯಿಂದ ಪ್ರತಿವರ್ಷವು ೧೦ನೇ ತರಗತಿ ಹಾಗೂ ದ್ವಿತೀಯ ಪಿ.ಯು.ಸಿ. ತೇರ್ಗಡೆಯಾದ ಸಂಘದ ಸದಸ್ಯರ ಮಕ್ಕಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತಲಾ ರೂ. ೨ ಸಾವಿರ ಹಾಗೂ ಪದವಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ತಲಾ ರೂ. ೫ ಸಾವಿರ ನೀಡಲಾಗುತ್ತಿದೆ ಎಂದರು. ಇದಲ್ಲದೇ ಕೋವಿಡ್ ಸಾಂಕ್ರಾಮಿಕ ರೋಗದಿಂದ ಮರಣಪಟ್ಟ ಸದಸ್ಯರಿಗೆ ಸಂಘದ ವತಿಯಿಂದ ರೂ. ೫ ಸಾವಿರ ಸಹಾಯಧನ ನೀಡಲಾಗುವುದು. ಸಂಘದ ವತಿಯಿಂದ ಸಭಾ ಭವನವನ್ನು ನಿರ್ಮಿಸಲಾಗಿದೆ ಎಂದರು.
ಸಭಾ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಎಂ.ಬಿ. ಜಾಯ್, ನಿರ್ದೇಶಕರಾದ ಕೆ.ಜಿ. ಈರಪ್ಪ, ಕೆ.ಡಿ. ನಾಣಯ್ಯ, ಪಿ.ಕೆ. ಚಂದ್ರನ್, ಕೆ.ಕೆ. ಚಂದ್ರಕುಮಾರ್, ಕೆ.ಎಸ್. ಸುನಿಲ್, ಎಂ.ಸಿ. ವಾಸು, ಎಸ್.ಬಿ. ಪ್ರತೀಶ್, ಹೆಚ್.ಕೆ. ಚೆಲುವಯ್ಯ, ಮೂಸಾ, ಎಂ.ಪಿ. ಪ್ರಮೀಳ, ಎಸ್.ಟಿ. ಪಾರ್ವತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಬಿ. ಪ್ರಸನ್ನ ಹಾಜರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಿ, ಗೌರವಿಸಲಾಯಿತು.