ಸೋಮವಾರಪೇಟೆ, ನ. ೧೨: ಕಳೆದ ೬೩ ವರ್ಷಗಳಿಂದ ನವರಾತ್ರಿ ದಿನದಂದು ಮನೆಯಲ್ಲೇ ನವದುರ್ಗೆಯರ ಬೊಂಬೆಗಳನ್ನು ಇಟ್ಟು ಪೂಜಿಸುವ ಮೂಲಕ ಸಂಪ್ರದಾಯವನ್ನು ಮುಂದುವರೆಸಿಕೊAಡು ಬಂದಿರುವ, ಸೋಮವಾರಪೇಟೆ ಪಟ್ಟಣದ ನಿವಾಸಿ ಶಾರದಾ ಶಂಕರಪ್ಪ ಅವರನ್ನು ಇನ್ನರ್ ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭ ಕ್ಲಬ್ ಅಧ್ಯಕ್ಷೆ ಆಶಾ ಯೋಗೇಂದ್ರ, ಕಾರ್ಯದರ್ಶಿ ಅಮೃತ ಕಿರಣ್, ಮಾಜಿ ಅಧ್ಯಕ್ಷೆ ಕವಿತಾ ವಿರೂಪಾಕ್ಷ, ಪದಾಧಿಕಾರಿ ಪ್ರೇಮಾ ಹೃಷಿಕೇಶ್, ದಾನಿಗಳಾದ ಶಂಕರಪ್ಪ ಉಪಸ್ಥಿತರಿದ್ದರು.