ನಾಪೋಕ್ಲು, ನ. ೧೨: ವರ್ಷ ಪೂರ್ತಿ ಸುರಿಯುತ್ತಿರುವ ಮಳೆ, ಹಿಂದಿನ ಸಾಲುಗಳಲ್ಲಿನ ಪ್ರಾಕೃತಿಕ ವಿಕೋಪಗಳಿಂದ ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ ಕೃಷಿಕ ಇತ್ತೀಚಿನ ದಿನಗಳಲ್ಲಿ ಕಾಡಾನೆಯ ಹಾವಳಿಯಿಂದ ಬಸವಳಿದಿದ್ದಾನೆ. ಬೆಳೆದು ನಿಂತಿರುವ ಭತ್ತದ ಗದ್ದೆಗಳು ಕಾಡಾನೆಗಳ ದಾಳಿಗೆ ಸಿಲುಕಿ ನಜ್ಜು ಗುಜ್ಜಾಗಿ ಬೆಳೆಗಾರ ಕಂಗಾಲಾಗಿದ್ದಾನೆ.
ಮಡಿಕೆೆÃರಿ ತಾಲೂಕಿನ ಕೋಕೇರಿ ಗ್ರಾಮ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಿಂದ ನಡೆಯುತ್ತಿರುವ ಕಾಡಾನೆಗಳ ನಿರಂತರ ದಾಳಿಯಿಂದ ಭತ್ತದ ಗದ್ದೆಗಳು ನಾಶವಾಗಿದೆ. ಗ್ರಾಮದ ಚಂಡೀರ ಕುಟುಂಬಸ್ಥರ ಗದ್ದೆಗಳಿಗೆ ರಾತ್ರಿಯ ವೇಳೆ ದಾಳಿ ನಡೆಸಿರುವ ಕಾಡಾನೆಗಳು ಭತ್ತದ ಸಸಿಗಳನ್ನು ತಿಂದು, ಗದ್ದೆ ಬಯಲಿನಲ್ಲೆಲ್ಲ ಮನಬಂದAತೆ ಸುತ್ತಾಡಿ ಕೃಷಿ ಹಾನಿಗೆ ಕಾರಣವಾಗಿವೆ.
ಚಂಡೀರ ಕುಟುಂಬದ ವಿಜಯಕುಮಾರ್, ಕಾಡಾನೆಗಳ ಉಪಟಳದ ಬಗ್ಗೆ ಪತ್ರಿಕೆಯೊಂದಿಗೆ ಮಾತನಾಡಿ, ಕಳೆÉದ ಎರಡು ಮೂರು ದಿನಗಳಿಂದ ಕಾಡಾನೆಗಳು ಭತ್ತದ ಕೃಷಿ ಗದ್ದೆಗಳಿಗೆ ದಾಳಿ ಇಡುತ್ತಿವೆ. ಅರಣ್ಯ ಇಲಾಖಾ ಅಧಿಕಾರಿ ಸಿಬ್ಬಂದಿಗಳು ಗ್ರಾಮ ವ್ಯಾಪ್ತಿಯ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕೆಲಸ ಮಾಡುತ್ತಾರೆ. ಆದರೆ, ಆನೆಗಳು ಮತ್ತೆ ಮತ್ತೆ ಗ್ರಾಮಗಳಿಗೆ ಮರಳಿ ಕೃಷಿಗೆ ಅಪಾರ ಹಾನಿಯನ್ನುಂಟು ಮಾಡುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾಡಾನೆಗಳ ಹಾವಳಿಯಿಂದ ಕೃಷಿಕ ಸಮೂಹದೊಂದಿಗೆ ಕಾರ್ಮಿಕರು ತೊಂದರೆಗೆ ಸಿಲುಕಿದ್ದಾರೆ. ಗದ್ದೆ ಮತ್ತು ತೋಟಗಳಲ್ಲಿ ಕೆಲಸ ನಿರ್ವಹಿಸಲು ಸಾಧ್ಯವಾಗದ ಪರಿಸ್ಥಿತಿ ಇದೆ.
ಗ್ರಾಮಗಳಿಗೆ ಲಗ್ಗೆ ಇಡುತ್ತಿರುವ ಪುಂಡಾನೆಗಳನ್ನು ಗುರುತಿಸಿ ಸೆರೆಹಿಡಿಯುವ ಮೂಲಕ ಗ್ರಾಮಸ್ಥರು ಎದುರಿಸುತ್ತಿರುವ ಸಂಕಷ್ಟಕ್ಕೆ ಅರಣ್ಯ ಇಲಾಖೆ ಪೂರ್ಣವಿರಾಮ ಹಾಕಬೇಕಾಗಿದೆ. ಇದರೊಂದಿಗೆ ಕಾಡಾನೆಗಳ ಹಾವಳಿಯಿಂದ ಕೃಷಿಕನಿಗೆ ಆಗಿರುವ ನಷ್ಟಕ್ಕೆ ಪರಿಹಾರವನ್ನು ನೀಡಬೇಕೆಂದು ವಿಜಯ ಕುಮಾರ್ ಆಗ್ರಹಿಸಿದರು.
ಕೋಕೇರಿ ಗ್ರಾಮದ ನಿವೃತ್ತ ಉದ್ಯೋಗಿ ಚಂಡೀರ ಚಿಣ್ಣಪ್ಪ ಎಂಬವರು ಒಂದೂವರೆ ಎಕರೆ ಭತ್ತದ ಕೃಷಿ, ೫ ಎಕರೆ ಕಾಫಿ ತೋಟವನ್ನು ಮಾಡಿಕೊಂಡು ಬದುಕು ಸಾಗಿಸುತ್ತಿದ್ದಾರೆ.
ಕಾಡಾನೆಗಳ ದಾಳಿಯಿಂದ ಭತ್ತದ ಫಸಲನ್ನು ಕಳೆÉದುಕೊಳ್ಳುವ ಹಂತಕ್ಕೆ ತಲುಪಿ ಕಂಗಾಲಾಗಿದ್ದಾರೆ. ಈ ಬಗ್ಗೆ ಚಿಣ್ಣಪ್ಪ ಮಾತನಾಡಿ, ಕಾಡಾನೆಗಳ ಉಪಟಳದಿಂದ ಜೀವನಕ್ಕೆ ದಾರಿ ಕಾಣದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿ, ಸರ್ಕಾರ ಕೃಷಿ ಚಟುವಟಿಕೆಗಳಿಗೆ ಸೂಕ್ತ ಪ್ರೋತ್ಸಾಹ ಮತ್ತು ನೆರವನ್ನು ನೀಡಬೇಕೆಂದು ಮನವಿ ಮಾಡಿದರು.
ಕೋಕೇರಿಯಲ್ಲಿ ಭತ್ತದ ಕೃಷಿ ನಡೆಸುತ್ತಿರುವ ತೋಟಂಬೈಲು ಅನಂತ ಕುಮಾರ್, ಕಾಡಾನೆಗಳ ಸ್ಥಳಾಂತರವೊAದೇ ಸಮಸ್ಯೆಗೆ ಶಾಶ್ವತ ಪರಿಹಾರವೆಂದರಲ್ಲದೆ ಕಾಡಾನೆಗಳ ದಾಳಿಯಿಂದ ಭತ್ತದ ಕೃಷಿಗೆ ಅಪಾರ ಹಾನಿಯುಂಟಾಗಿದೆ. ಕಾಫಿ ತೋಟಗಳಿಗೆ ಹಾನಿಯಾಗಿದೆ. ಪ್ರತಿ ಕಾಫಿ ಗಿಡಕ್ಕೆ ಕೇವಲ ೫೦ ರೂ. ನಿಂದ ೧೦೦ ರೂ.ವರೆಗೆ ಪರಿಹಾರವನ್ನು ನೀಡಲಾಗುತ್ತದೆ. ಇದು ಸಾಲದು ಎಂದರು.
ಕೋಕೇರಿ ಗ್ರಾಮದ ಚಂಡೀರ ಈರಪ್ಪ ಅವರ ಭತ್ತದ ಗದ್ದೆ ನಾಟಿ ಮಾಡಿದ ಸಂದರ್ಭ ಕಾಡಾನೆಗಳು ದಾಳಿ ನಡೆಸಿ ಹಾನಿಯನ್ನುಂಟು ಮಾಡಿದ್ದವು.
ಮತ್ತೆ ನಾಟಿ ಕಾರ್ಯ ಮಾಡಿ ಇದೀಗ ಭತ್ತದ ಸಸಿಗಳಲ್ಲಿ ತೆನೆ ಮೂಡುತ್ತಿರುವ ಹಂತದಲ್ಲಿ ಕಾಡಾನೆಗಳು ದಾಳಿ ಮಾಡಿ ಇಡೀ ಗದ್ದೆಯನ್ನೆ ಹಾಳು ಮಾಡಿವೆ. ಇದರಿಂದ ಬೇಸತ್ತಿರುವ ಈರಪ್ಪ ಅವರು, ಸರ್ಕಾರ ಕಾಡಾನೆ ಹಾವಳಿಯಿಂದ ಹಾನಿಗೊಳಗಾದ ಪ್ರತಿ ಎಕರೆ ಕೃಷಿ ಭೂಮಿಗೆ ಕನಿಷ್ಟ ೨೦ ಸಾವಿರ ಪರಿಹಾರ ಧನ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
- ದುಗ್ಗಳ ಸದಾನಂದ.