ಮಡಿಕೇರಿ, ನ. ೧೨: ಮಂಗಳಾದೇವಿ ನಗರದ ಅಂಗನವಾಡಿ ಆರಂಭೋತ್ಸವ ಇತ್ತೀಚೆಗೆ ನಡೆಯಿತು. ಅಂಗನವಾಡಿಯನ್ನು ತಳಿರು ತೋರಣಗಳಿಂದ ಸಿಂಗರಿಸಿ ಮಕ್ಕಳನ್ನು ಬರಮಾಡಿಕೊಳ್ಳಲಾಯಿತು.

ಈ ಸಂದರ್ಭ ನಗರಸಭಾ ಸದಸ್ಯೆ ಸಬಿತ, ಸಮಾಜ ಸೇವಕಿ ಕಾವ್ಯ, ಆಶಾಕಾರ್ಯಕರ್ತೆ ಬೇಬಿ, ಅಂಗನವಾಡಿ ಕಾರ್ಯಕರ್ತೆ ಹೆಚ್.ಪಿ. ಶಕುಂತಲ ಸೇರಿದಂತೆ ಬಾಲವಿಕಾಸ ಸಮಿತಿ ಸದಸ್ಯರು, ಮಕ್ಕಳ ಪೋಷಕರು ಹಾಜರಿದ್ದರು. ಹೆಚ್.ಬಿ. ನಾಗಮ್ಮ, ಸಂಧ್ಯಾ ಪ್ರಕಾಶ್ ಪ್ರಾರ್ಥಿಸಿದರು.