ಕುಶಾಲನಗರ, ನ. ೧೧: ಕುಶಾಲನಗರ ಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯ ಮನೆ ಕಳ್ಳತನ ಪ್ರಕರಣಗಳಿಗೆ ಸಂಬAಧಿಸಿದAತೆ ಓರ್ವ ಅಂತರ್ ಜಿಲ್ಲಾ ಚೋರರನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗಂಜಾA ನಿವಾಸಿ, ಸೈಯದ್ ಗೌಸ್ ಎಂಬಾತ ಆರೋಪಿಯಾಗಿದ್ದು ಆತನಿಂದ ೨ ಲಕ್ಷ ರೂ. ಮೌಲ್ಯದ ಚಿನ್ನಾಭರಣಗಳು, ೧ಮೊಬೈಲ್ ಫೋನ್ ಹಾಗೂ ೧ಲಕ್ಷಕ್ಕೂ ಅಧಿಕ ಮೌಲ್ಯದ ೨ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕುಶಾಲನಗರ ಪಟ್ಟಣದ ಬಸವೇಶ್ವರ ಬಡಾವಣೆ, ಕಾವೇರಿ ಬಡಾವಣೆಯಲ್ಲಿ ೨ ಮನೆ ಕಳ್ಳತನ ಹಾಗೂ ದಂಡಿನಪೇಟೆಯಲ್ಲಿ ೧ವಾಹನ ಕಳವು ಪ್ರಕರಣಕ್ಕೆ ಸಂಬAಧಿಸಿದAತೆ ಕುಶಾಲನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿ ಗೌಸ್ ಕುಶಾಲನಗರ ಸುತ್ತಮುತ್ತ ವ್ಯಾಪ್ತಿಯಲ್ಲಿ ಪೈಂಟಿAಗ್ ಕೆಲಸಕ್ಕೆಂದು ಆಗಾಗ್ಗೆ ಬರುತ್ತಿದ್ದು ಕಳ್ಳತನ

(ಮೊದಲ ಪುಟದಿಂದ) ಮಾಡುತ್ತಿರುವ ಬಗ್ಗೆ ಮಾಹಿತಿಗಳು ಲಭ್ಯವಾಗಿವೆ.

ಪಟ್ಟಣದಲ್ಲಿ ಬೀಗ ಹಾಕಿರುವ ಮನೆಗಳನ್ನು ಗಮನಿಸಿ ಕಳ್ಳತನ ಮಾಡುವುದು ಗೌಸ್ ಚಾಳಿ ಆಗಿತ್ತು. ನವೆಂಬರ್ ೧೦ ರಂದು ರಾತ್ರಿ ಗಸ್ತಿನಲ್ಲಿದ್ದ ಕುಶಾಲನಗರ ಎ ಎಸ್ ಐ ಮಂಜುನಾಥ್ ಹಾಗೂ ಸಿಬ್ಬಂದಿ ಅರುಣಕುಮಾರ್ ವಾಹನ ತಪಾಸಣೆ ವೇಳೆಗೆ ವಾಹನ ಸಂಖ್ಯೆ ಕೆ ಎ ೧೨ ಯು ೮೯೮೯ ಯಲ್ಲಿ ಇದ್ದ ವ್ಯಕ್ತಿಯ ಬಗ್ಗೆ ಅನುಮಾನಗೊಂಡು ತಪಾಸಣೆ ಸಂದರ್ಭ ಆತನ ವಾಹನದಲ್ಲಿ ಮನೆ ಕಳ್ಳತನ ಮಾಡಲು ಬಳಸುವ ಆಯುಧ ಕಂಡು ಬಂದಿದೆ. ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಿದ ಸಂದರ್ಭ ಕುಶಾಲನಗರದ ೩ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ಖಚಿತಗೊಂಡಿದೆ. ಆರೋಪಿಯಿಂದ ೫೯.೧೫ಗ್ರಾಂ ಚಿನ್ನದ ಒಡವೆಗಳು, ಹೋಂಡಾ ಆ್ಯಕ್ಟಿವಾ ಸ್ಕೂಟರ್, ಯಮಹಾ ಸ್ಕೂಟರ್ ಮತ್ತು ೧ ಆ್ಯಪಲ್ ಐಫೋನ್ ಮೊಬೈಲ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸ್ ಅಧೀಕ್ಷಕಿ ಕ್ಷಮಾಮಿಶ್ರ ಕುಶಾಲನಗರ ಡಿವೈಎಸ್ಪಿ ಎಚ್.ಎಂ. ಶೈಲೇಂದ್ರ ಅವರ ಮಾರ್ಗದರ್ಶನದಲ್ಲಿ ಕುಶಾಲನಗರದ ವೃತ್ತ ನಿರೀಕ್ಷಕ ಎಂ. ಮಹೇಶ್ ನೇತೃತ್ವದಲ್ಲಿ ಪಟ್ಟಣ ಠಾಣಾಧಿಕಾರಿ ಮಾದೇಶ್, ಎಎಸ್‌ಐ ಮಂಜುನಾಥ್, ಗೋಪಾಲ್, ಸಿಬ್ಬಂದಿಗಳಾದ ಪ್ರಕಾಶ್, ಡಿ. ಎಸ್. ಅರುಣ್‌ಕುಮಾರ್, ರಂಜಿತ್, ಸೌಮ್ಯ, ಚಾಲಕ ಶೇಷಪ್ಪ ಮತ್ತು ಕೊಡಗು ಜಿಲ್ಲಾ ಸಿಡಿಆರ್ ವಿಭಾಗದ ಸಿಬ್ಬಂದಿಗಳಾದ ರಾಜೇಶ್, ಗಿರೀಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.