ಮಡಿಕೇರಿ, ನ. ೧೧: ಮಡಿಕೇರಿ ನಗರದಲ್ಲಿ ಕಳೆದ ಹಲವು ತಿಂಗಳ ಹಿಂದೆ ಉದ್ಘಾಟನೆಗೊಂಡಿರುವ ಆಕರ್ಷಕ ಕೇಂದ್ರವಾಗಿರುವ ಜನರಲ್ ತಿಮ್ಮಯ್ಯ ಮ್ಯೂಸಿಯಂನಲ್ಲಿ ಈ ತನಕ ರೂ. ೭.೫೦ ಲಕ್ಷ ಹಣ ಶುಲ್ಕದ ರೂಪದಲ್ಲಿ ಸಂಗ್ರಹವಾಗಿದೆ.

ಪ್ರಸ್ತುತ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಈ ಕೇಂದ್ರ ನಿರ್ವಹಿಸಲ್ಪಡುತ್ತಿದೆ. ೨೦೨೧ರ ಫೆಬ್ರವರಿ ೬ ರಂದು ರಾಷ್ಟçಪತಿ ರಾಮನಾಥ್ ಕೋವಿಂದ್ ಅವರಿಂದ ಉದ್ಘಾಟಿಸಲ್ಪಟ್ಟಿದ್ದ ತಿಮ್ಮಯ್ಯ ಮ್ಯೂಸಿಯಂಗೆ ನಂತರದ ಕೆಲವು ಸಮಯ ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿತ್ತು. ಬಳಿಕ ಹಿರಿಯರಿಗೆ ರೂ. ೩೦, ಮಕ್ಕಳಿಗೆ ರೂ. ೧೫ ಪ್ರವೇಶ ದರ ನಿಗದಿ ಪಡಿಸಲಾಗಿದೆ. ಐದು ವರ್ಷದೊಳಗಿನ ಮಕ್ಕಳಿಗೆ ಉಚಿತ ಪ್ರವೇಶದ ಅವಕಾಶವಿದೆ.

ಏಪ್ರಿಲ್ ಅಂತ್ಯದಿAದ ಕೊರೊನಾ ಲಾಕ್‌ಡೌನ್, ದಸರಾ ಸಂದರ್ಭ ಜಿಲ್ಲಾಡಳಿತದ ನಿರ್ಬಂಧ ಕಾರಣದಿಂದಾಗಿ ಮ್ಯೂಸಿಯಂ ಮುಚ್ಚಲ್ಪಟ್ಟಿತ್ತು. ಇದೀಗ ಸೋಮವಾರದ ದಿನ ಹೊರತುಪಡಿಸಿ ವಾರದ ಇತರ ಎಲ್ಲಾ ದಿನಗಳಲ್ಲೂ ಬೆಳಿಗ್ಗೆ ೧೦ ರಿಂದ ಸಂಜೆ ೬ರ ತನಕ ಮೂಸಿಯಂ ವೀಕ್ಷಣೆಗೆ ಸಾರ್ವಜನಿ ಕರಿಗೆ ಅವಕಾಶವಿರುವದಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಟಿ. ದರ್ಶನ್ ಅವರು ಮಾಹಿತಿ ನೀಡಿದ್ದಾರೆ. ನಿರ್ವಹಣೆಯ ಕಾರಣಕ್ಕೆ ಸೋಮವಾರದಂದು ಮುಚ್ಚಲ್ಪಟ್ಟಿರುತ್ತದೆ. ಕೇಂದ್ರ ಉದ್ಘಾಟನೆಗೊಂಡ ಬಳಿಕ ಈ ತನಕ ರೂ. ೭.೫೦ ಲಕ್ಷ ಹಣ ಸಂಗ್ರಹಾತಿಯಾಗಿದೆ ಎಂದು ಅವರು ತಿಳಿಸಿದ್ದಾರೆ.