ಗೋಣಿಕೊಪ್ಪಲು, ನ. ೧೦: ಸಂವಿಧಾನದಡಿಯಲ್ಲಿ ಸಂಘಟನೆಯನ್ನು ಸ್ಥಾಪಿಸುವುದು ಮೂಲಭೂತ ಹಕ್ಕಾಗಿದೆ ಎಂದು ಹೈಕೋರ್ಟಿನ ಹಿರಿಯ ನ್ಯಾಯವಾದಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟರು. ಗೋಣಿಕೊಪ್ಪಲು ವಿನ ಸ್ಪೆöÊಸ್‌ರಾಕ್ ಸಭಾಂಗಣದಲ್ಲಿ ಪೊನ್ನಂಪೇಟೆ ನೂತನ ತಾಲೂಕು ಸವಿತಾ ಸಮಾಜದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಸಂಘಟನೆ ಶಕ್ತಿ ಇದ್ದಲ್ಲಿ ಸರ್ಕಾರದ ಯೋಜನೆಗಳನ್ನು ಸಕಾಲದಲ್ಲಿ ಪಡೆಯಲು ಅನುಕೂಲ ವಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆ ಅಡಿ ಏಕ ಧ್ವನಿಗೆ ಸ್ಪಂದನ ಸಿಗುತ್ತಿಲ್ಲ. ಆದರೆ ಸಂಘಟನಾತ್ಮಕವಾಗಿ ಹೋರಾಟ ನಡೆಸಿದಲ್ಲಿ ಜಯ ಲಭಿಸಲಿದೆ. ಈ ನಿಟ್ಟಿನಲ್ಲಿ ಸಂಘಟನೆಗಳು ಹೆಚ್ಚಾಗ ಬೇಕು. ಸಂವಿಧಾನದಲ್ಲಿ ಸಂಘಟನೆ ಯನ್ನು ಮೂಲಭೂತ ಹಕ್ಕಾಗಿ ನೀಡಿದ್ದಾರೆ. ಸವಿತಾ ಸಮಾಜಕ್ಕೆ ತನ್ನದೆ ಆದ ಇತಿಹಾಸವಿದೆ ಕೇವಲ ಕಾರ್ಯಕ್ರಮ ಕಷ್ಟೆ ಸಂಘಟನೆ ಸೀಮಿತವಾಗಬಾರದು, ವೃತ್ತಿ ಗೋಣಿಕೊಪ್ಪಲು, ನ. ೧೦: ಸಂವಿಧಾನದಡಿಯಲ್ಲಿ ಸಂಘಟನೆಯನ್ನು ಸ್ಥಾಪಿಸುವುದು ಮೂಲಭೂತ ಹಕ್ಕಾಗಿದೆ ಎಂದು ಹೈಕೋರ್ಟಿನ ಹಿರಿಯ ನ್ಯಾಯವಾದಿ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅಭಿಪ್ರಾಯಪಟ್ಟರು. ಗೋಣಿಕೊಪ್ಪಲು ವಿನ ಸ್ಪೆöÊಸ್‌ರಾಕ್ ಸಭಾಂಗಣದಲ್ಲಿ ಪೊನ್ನಂಪೇಟೆ ನೂತನ ತಾಲೂಕು ಸವಿತಾ ಸಮಾಜದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ಸಂಘಟನೆ ಶಕ್ತಿ ಇದ್ದಲ್ಲಿ ಸರ್ಕಾರದ ಯೋಜನೆಗಳನ್ನು ಸಕಾಲದಲ್ಲಿ ಪಡೆಯಲು ಅನುಕೂಲ ವಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆ ಅಡಿ ಏಕ ಧ್ವನಿಗೆ ಸ್ಪಂದನ ಸಿಗುತ್ತಿಲ್ಲ. ಆದರೆ ಸಂಘಟನಾತ್ಮಕವಾಗಿ ಹೋರಾಟ ನಡೆಸಿದಲ್ಲಿ ಜಯ ಲಭಿಸಲಿದೆ. ಈ ನಿಟ್ಟಿನಲ್ಲಿ ಸಂಘಟನೆಗಳು ಹೆಚ್ಚಾಗ ಬೇಕು. ಸಂವಿಧಾನದಲ್ಲಿ ಸಂಘಟನೆ ಯನ್ನು ಮೂಲಭೂತ ಹಕ್ಕಾಗಿ ನೀಡಿದ್ದಾರೆ. ಸವಿತಾ ಸಮಾಜಕ್ಕೆ ತನ್ನದೆ ಆದ ಇತಿಹಾಸವಿದೆ ಕೇವಲ ಕಾರ್ಯಕ್ರಮ ಕಷ್ಟೆ ಸಂಘಟನೆ ಸೀಮಿತವಾಗಬಾರದು, ವೃತ್ತಿ ತಾಲೂಕಿನ ಎಲ್ಲಾ ಭಾಗದಲ್ಲಿಯೂ ಸಮಿತಿಗಳನ್ನು ರಚಿಸಿ ಜಿಲ್ಲಾ ಸಂಘದ ನಿರ್ದೇಶನದಂತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದೆಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಚೇಂಬರ್ ಆಫ್ ಕಾಮರ್ಸ್ನ ಮಾಜಿ ಅಧ್ಯಕ್ಷ, ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯ ಬಿ.ಎನ್. ಪ್ರಕಾಶ್ ಮಾತನಾಡಿ ಸಂಘಟನೆಯ ಶಕ್ತಿಯಿಂದ ಸರ್ಕಾರದ ಯೋಜನೆಗಳನ್ನು ಸಕಾಲದಲ್ಲಿ ಪಡೆಯಲು ಅನುಕೂಲವಾಗುತ್ತದೆ. ಆ ನಿಟ್ಟಿನಲ್ಲಿ ಸಂಘವನ್ನು ಗಟ್ಟಿಗೊಳಿಸಿ ಒಗ್ಗಟ್ಟಿನಿಂದ ಸಾಗುವಂತೆ ಸಲಹೆ ನೀಡಿದರು.

ಮತ್ತೋರ್ವ ಮುಖ್ಯ ಅತಿಥಿ ಸವಿತಾ ಸಮಾಜದ ಜಿಲ್ಲಾಧ್ಯಕ್ಷ ಕೆ.ಎಸ್. ದೊರೇಶ್ ಮಾತನಾಡಿ, ಗೋಣಿಕೊಪ್ಪ ವ್ಯಾಪ್ತಿಯಲ್ಲಿ ಸಂಘವು ಇದೀಗ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿರುವುದರಿAದ ಸರ್ಕಾರದ ಯೋಜನೆಗಳನ್ನು ಪಡೆಯಲು ಅನುಕೂಲವಾಗಲಿದೆ. ವೃತ್ತಿ ಬಾಂಧವರಿಗೆ ಮುಂದಿನ ದಿನಗಳಲ್ಲಿ ಜಿಲ್ಲಾ ಸಂಘದ ವತಿಯಿಂದ ಗುರುತಿನ ಚೀಟಿಗಳನ್ನು ವಿತರಿಸ ಲಾಗುವುದು. ಪ್ರತಿ ಗ್ರಾಮದಲ್ಲಿಯೂ ಸಂಘವನ್ನು ಸ್ಥಾಪಿಸಲು ಸಮಿತಿಯು ಶ್ರಮ ವಹಿಸಬೇಕೆಂದರು. ಸವಿತಾ ಸಮಾಜದ ಉಪಾಧ್ಯಕ್ಷ ಹೀಮ್ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ವೃತ್ತಿ ಬಾಂಧವರು ಸಾಕಷ್ಟು ಕಷ್ಟವನ್ನು ಎದುರಿಸುವ ಪ್ರಸಂಗ ಬಂದೊದಗಿತ್ತು. ಸಂಘಟನೆಯ ಶಕ್ತಿಯಿಂದ ನ್ಯಾಯ ಪಡೆಯಲು ಸಂಘವನ್ನು ಅಸ್ತಿತ್ವಕ್ಕೆ ತರಲಾಗಿದೆ ಎಂದರು.

ಸಭೆಯಲ್ಲಿ ಪದಾಧಿಕಾರಿಗಳಾದ ತಂಗರಾಜು, ಬೋಸು, ಶ್ರೀಕಾಂತ್, ಸುಬ್ರಮಣಿ, ಪುಟ್ಟಪ್ಪ, ರವಿ, ಕುಮಾರ್, ಉದಯ, ಮುಂತಾದವರು ಉಪಸ್ಥಿತರಿದ್ದರು. ಮೋಕ್ಷಿತ ಪ್ರಾರ್ಥಿಸಿ ಚನ್ನನಾಯಕ್ ಸ್ವಾಗತಿಸಿ ವಂದಿಸಿದರು. ದಕ್ಷಿಣ ಕೊಡಗಿನ ವಿವಿಧ ಭಾಗದಿಂದ ವೃತ್ತಿ ಬಾಂಧವರು ಭಾಗವಹಿಸಿದ್ದರು.

- ಹೆಚ್.ಕೆ. ಜಗದೀಶ್