ಸೋಮವಾರಪೇಟೆ, ನ. ೧೦: ಕೊರೊನಾ ಹಿನ್ನೆಲೆ ಮುಚ್ಚಲ್ಪಟ್ಟಿದ್ದ ಅಂಗನವಾಡಿ ಕೇಂದ್ರಗಳು ಇದೀಗ ಪುನರ್ ಆರಂಭಗೊAಡಿದ್ದು, ಕಿರಗಂದೂರು ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಆಗಮಿಸಿದ ಮಕ್ಕಳನ್ನು ಗ್ರಾಮದ ಪ್ರಮುಖರು, ಜನಪ್ರತಿನಿಧಿಗಳು ಗುಲಾಬಿ ಹೂವುಗಳನ್ನು ನೀಡಿ ಸ್ವಾಗತಿಸಿದರು.
ಅಂಗನವಾಡಿ ಶಿಕ್ಷಕಿ ಕೆ.ಆರ್. ಚಂದ್ರಿಕಾ ಮಾತನಾಡಿ, ಕಳೆದ ೧೮ ತಿಂಗಳಿನಿAದ ಅಂಗನವಾಡಿಗಳು ಮುಚ್ಚಿದ್ದರೂ ಮಕ್ಕಳಿಗೆ ಪೌಷ್ಠಿಕಾಂಶಯುಕ್ತ ಆಹಾರವನ್ನು ಮನೆಗಳಿಗೆ ತಲುಪಿಸಲಾಗುತ್ತಿತ್ತು. ಇದೀಗ ಮತ್ತೆ ಅಂಗನವಾಡಿಗಳು ಆರಂಭಗೊAಡಿದ್ದು, ೩ ರಿಂದ ೬ ವರ್ಷದೊಳಗಿನ ಮಕ್ಕಳನ್ನು ಕೇಂದ್ರಕ್ಕೆ ಪೋಷಕರು ಕರೆತರಬೇಕು. ಆ ಮೂಲಕ ಮಕ್ಕಳ ಬೆಳವಣಿಗೆಗೆ ಸಹಕರಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷ ರಘು, ಸದಸ್ಯರುಗಳಾದ ತಾರಾ, ಕುಸುಮ, ರುದ್ರಪ್ಪ, ಸುಮಿತ್ರ, ಶಾಲಾ ಮುಖ್ಯೋಪಾಧ್ಯಾಯ ಡಿ.ಪಿ. ಧರ್ಮಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.