ಮಡಿಕೇರಿ, ನ. ೯: ಅಧ್ಯಾಪಕಿ, ಸಾಹಿತಿ ಸುನಿತಾ ಲೋಕೇಶ್ ಅವರು ಬರೆದಿರುವ ಕಥೆಯೊಂದು ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪಠ್ಯವಾಗಿ ಆಯ್ಕೆಗೊಂಡಿದೆ. ಸುನಿತಾ ಅವರು ಬರೆದಿರುವ ‘ಕಲ್ಲುಮೊಟ್ಟೆ ಕಥೆ’ ಬಿ.ಕಾಂ ವಿದ್ಯಾರ್ಥಿಗಳಿಗೆ ಪಠ್ಯವಾಗಿ ಪರಿಗಣಿಸಲ್ಪಟ್ಟಿದೆ.
ಸುನಿತಾ ಲೋಕೇಶ್ ಅವರು ಕಥೆ, ಕವನ, ಭಾಷಾಂತರ, ಪ್ರಬಂಧ ಬರಹಗಳಲ್ಲಿ ಹೆಸರು ಮಾಡಿದ್ದಾರೆ. ಕುವೆಂಪು ಭಾಷಾ ಪ್ರಾಧಿಕಾರಕ್ಕೆ ಮಲೆಯಾಳಂನಿAದ ಕನ್ನಡಕ್ಕೆ ಪಾಲ್ ಸಕಾರಿಯ ಕಥೆ, ಹಂಪಿ ವಿಶ್ವವಿದ್ಯಾಲಯಕ್ಕೆ ಮಲೆಯಾಳಂ ಸಾಹಿತ್ಯ ಚರಿತ್ರೆಯಲ್ಲಿ ಸಣ್ಣ ಕಥೆಗಾರ್ತಿಯರು, ಆಯ್ದ ಕನ್ನಡ ಕವಿತೆಗಳ ಅನುವಾದ ಇತ್ಯಾದಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಬರೆದ ಸುಮಾರು ಏಳು ಕೃತಿಗಳು ಬಿಡುಗಡೆಗೊಂಡಿವೆ.
ನೆನಪಿನ ಹೆಜ್ಜೆಗೆ ಗೆಜ್ಜೆಯ ಕಟ್ಟಿ ಪ್ರಬಂಧಕ್ಕೆ ಕೊಡಗಿನ ಗೌರಮ್ಮ ಪ್ರಶಸ್ತಿ, ದಾರಿದೀಪ ಪತ್ರಿಕೆಯಿಂದ ಕಾಯಕ ರತ್ನ ಪ್ರಶಸ್ತಿ ಹಾಗೂ ಮಾನವ ಹಕ್ಕುಗಳ ರಕ್ಷಣಾ ವೇದಿಕೆಯಾದ ಕನ್ನಡ ಚೇತನ ಪ್ರಶಸ್ತಿ ದೊರೆತಿದೆ.