ಮುಳ್ಳೂರು, ನ. ೯: ರಕ್ತದಾನ ಮಾಡುವುದರಿಂದ ವ್ಯಕ್ತಿಯ ಜೀವ ಉಳಿಸುವುದರ ಜೊತೆಯಲ್ಲಿ ದಾನಿಯ ಆರೋಗ್ಯವು ವೃದ್ಧಿಸುತ್ತದೆ ಎಂದು ಮಡಿಕೇರಿ ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಕರುಂಬಯ್ಯ ಅಭಿಪ್ರಾಯಪಟ್ಟರು.

ಅವರು ಸಮೀಪದ ಆಲೂರುಸಿದ್ದಾಪುರ ಅರೆಭಾಷೆ ಗೌಡ ಸಮಾಜ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ನಡೆದ ಸಾರ್ವಜನಿಕ ಸ್ವಯಂ ಪ್ರೇರಿತ ರಕ್ತದಾನ ಶಿಬಿರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿ ದ್ದರು. ಆಸ್ಪತ್ರೆಗಳಲ್ಲಿ ಹೆರಿಗೆ ಸಂದರ್ಭ ಮಹಿಳೆಯರಿಗೆ, ರಕ್ತಹೀನತೆ ಸಂಬAಧ ರೋಗಿಗಳಿಗೆ ಹಾಗೂ ಅಪಘಾತ ಸಂದರ್ಭ ರೋಗಿಗಳಿಗೆ ರಕ್ತಕೊಡುವ ಅಗತ್ಯ ಹೆಚ್ಚಾಗಿರುತ್ತದೆ.

ರಕ್ತದಾನ ಶಿಬಿರಗಳಲ್ಲಿ ದಾನಿಗಳಿಂದ ಸಂಗ್ರಹವಾದ ರಕ್ತವನ್ನು ರೋಗಿಗಳಿಗೆ ನೀಡುವ ಮೂಲಕ ರೋಗಿಯ ಜೀವವನ್ನು ಉಳಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಹೆಚ್ಚಾಗಿ ರಕ್ತದಾನ ಶಿಬಿರಗಳು ನಡೆಯುತ್ತಿರಬೇಕು ಎಂದರು. ಕೊಡಗಿನಲ್ಲಿ ಪ್ರತಿ ತಿಂಗಳು ರೋಗಿಗಳಿಗೆ ೨೫೦ ಯೂನಿಟ್ ರಕ್ತ ಕೊಡಬೇಕಾಗುತ್ತದೆ; ಇದರಲ್ಲಿ ೩೦ ರಿಂದ ೬೦ ಯೂನಿಟ್ ರಕ್ತವು ವಿವಿಧ ಸಂಘ-ಸAಸ್ಥೆಗಳು ಹಮ್ಮಿಕೊಳ್ಳುವ ರಕ್ತದಾನ ಶಿಬಿರಗಳಲ್ಲಿ ಸಂಗ್ರಹವಾಗುತ್ತದೆ.

ಈ ದಿಸೆಯಲ್ಲಿ ಸಂಘ-ಸAಸ್ಥೆಗಳು ಹಮ್ಮಿಕೊಳ್ಳುವ ರಕ್ತದಾನ ಶಿಬಿರಗಳಲ್ಲಿ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡುವ ಮೂಲಕ ರಕ್ತನಿಧಿ ಕೇಂದ್ರದಲ್ಲಿ ರಕ್ತ ಕೊರತೆಯಾಗದಂತೆ ಸಹಕರಿಸಬೇಕು. ರಕ್ತದಾನ ಮಾಡುವುದರಿಂದ ದೇಹದಲ್ಲಿ ಮತ್ತಷ್ಟು ರಕ್ತ ಸಂಗ್ರಹವಾಗುವುದರ ಜೊತೆಯಲ್ಲಿ ಆರೋಗ್ಯವು ಸುಧಾರಿಸುತ್ತದೆ ಎಂದರು.ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಸುಪರ್ಣ ಕೃಷ್ಣಾನಂದ್ ಪ್ರಾಸ್ತಾವಿಕವಾಗಿ ಮಾತನಾಡಿ, ಆಲೂರುಸಿದ್ದಾಪುರ ಅರೆಭಾಷೆ ಗೌಡ ಸಮಾಜವು ಕಳೆದ ೩ ವರ್ಷಗಳಿಂದ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳುತ್ತಿರುವುದು ಹಾಗೂ ಆರೋಗ್ಯ ಸೇವೆಗೆ ಆಸ್ಪತ್ರೆಯೊಂದಿಗೆ ಸಹಕರಿಸುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅರೆಭಾಷೆ ಗೌಡ ಸಮಾಜದ ಅಧ್ಯಕ್ಷ ದೇವಾಯಿರ ಗಿರೀಶ್ ಮಾತನಾಡಿದರು. ಪ್ರಮುಖರಾದ ಬಟ್ಯನ ಈರಪ್ಪ, ಲೀಲಾಕುಮಾರ್ ವೇದಿಕೆಯಲ್ಲಿದ್ದರು. ಕಾರ್ಯಕ್ರಮದಲ್ಲಿ ಅರೆಭಾಷೆ ಗೌಡ ಸಮಾಜದ ಸದಸ್ಯರು, ಆಸ್ಪತ್ರೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ರಕ್ತದಾನಿಗಳು ಪಾಲ್ಗೊಂಡಿದ್ದರು.