ಮಡಿಕೇರಿ, ನ. ೧೦: ಕೊಡಗು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾಗಿ ವೇದಮೂರ್ತಿ ಅವರು ನೇಮಕಗೊಂಡಿದ್ದಾರೆ. ಉಡುಪಿ ಜಿಲ್ಲೆಯ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿದ್ದ ವೇದಮೂರ್ತಿ ಅವರನ್ನು ಕೊಡಗು ಜಿಲ್ಲೆಗೆ ವರ್ಗಾಯಿಸಲಾಗಿದೆ. ಈ ಹಿಂದೆ ಉಪ ನಿರ್ದೇಶಕರಾಗಿದ್ದ ಮಚ್ಚಾಡೋ ಅವರು ನಿವೃತ್ತರಾದ ಬಳಿಕ ಈ ತನಕ ಪ್ರಭಾರ ಅಧಿಕಾರಿಯಾಗಿ ಕೂಡಿಗೆ ಡಯಟ್‌ನ ಮಂಜುನಾಥ್ ಅವರು ಕರ್ತವ್ಯದಲ್ಲಿದ್ದರು.