ಮಡಿಕೇರಿ, ನ. ೧೦: ರಾಜ್ಯದಲ್ಲಿ ತೆರವಾಗುತ್ತಿರುವ ೨೫ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಸರಕಾರಿ ಕಾರ್ಯಕ್ರಮಗಳು ರದ್ದುಗೊಂಡಿವೆ. ಚುನಾವಣೆ ಪ್ರಕಟಗೊಂಡ ದಿನಾಂಕದಿAದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬರುವುದರಿಂದ ನಿಗದಿತ ಕಾರ್ಯಕ್ರಮಗಳು ರದ್ದಾಗಿವೆ. ಜಿಲ್ಲೆಯಲ್ಲಿ ತಾ. ೧೨ರಂದು ನಿಗದಿಯಾಗಿದ್ದ ಅಂತ್ಯೋದಯ ಕಾರ್ಯಕ್ರಮ, ತಾ. ೧೧ ರಂದು (ಇಂದು) ಸರಕಾರ ಪ್ರಕಟಿಸಿದ್ದ ಒನಕೆ ಓಬವ್ವ ಜಯಂತಿಯAತಹ ಕಾರ್ಯಕ್ರಮಗಳು ನೀತಿ ಸಂಹಿತೆ ಕಾರಣದಿಂದಾಗಿ ರದ್ದು ಅಥವಾ ಮುಂದೂಡಲ್ಪಟ್ಟಿವೆ. ನ. ೧೬ರಂದು ಚುನಾವಣೆಗೆ ಸಂಬAಧಿಸಿದAತೆ ಅಧಿಸೂಚನೆ ಪ್ರಕಟಗೊಳ್ಳಲಿದೆ. ತಾ. ೨೩ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ತಾ. ೨೪ರಂದು ಪರಿಶೀಲನೆ, ತಾ. ೨೬ರಂದು ಹಿಂಪಡೆಯಲು ಕೊನೆಯ ದಿನ ಹಾಗೂ ಡಿಸೆಂಬರ್ ೧೦ರಂದು ಬೆಳಿಗ್ಗೆ ೮ ರಿಂದ ಸಂಜೆ ೪ರ ತನಕ ಚುನಾವಣೆ ನಿಗದಿಯಾಗಿದೆ. ಕೊಡಗಿನಲ್ಲಿಯೂ ಹಾಲಿ ವಿಧಾನಪರಿಷತ್ ಸದಸ್ಯರಾಗಿರುವ ಎಂ.ಪಿ. ಸುನಿಲ್ ಸುಬ್ರಮಣಿ ಅವರ ಅಧಿಕಾರಾವಧಿ ಕೊನೆಗೊಳ್ಳುತ್ತಿದ್ದು, ಜಿಲ್ಲೆಯಲ್ಲಿಯೂ ಇದೀಗ ಚುನಾವಣಾ ಕಾವು ಆರಂಭಗೊAಡಿದೆ.