ಮಡಿಕೇರಿ, ನ. ೯: ರೋಟರಿ ವಲಯ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ಚಾಂಪಿಯನ್ ಪ್ರಶಸ್ತಿ ತನ್ನದಾಗಿಸಿಕೊಂಡಿದೆ.

ಗೋಣಿಕೊಪ್ಪಲು ರೋಟರಿ ಕ್ಲಬ್ ವತಿಯಿಂದ ಆಯೋಜಿತ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಮಡಿಕೇರಿಯ ರೋಟರಿ ಮಿಸ್ಟಿ ಹಿಲ್ಸ್ ವಿವಿಧ ವಿಭಾಗಗಳಲ್ಲಿ ೯ ಬಹುಮಾನ ಪಡೆಯುವ ಮೂಲಕ ಚಾಂಪಿಯನ್ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.

ಹಾತೂರು ಸರ್ಕಾರಿ ಶಾಲಾ ಸಭಾ ವೇದಿಕೆಯಲ್ಲಿ ಆಯೋಜಿತ ವಲಯ ಸಾಂಸ್ಕೃತಿಕ ಸ್ಪರ್ಧೆಗಳನ್ನು ಉದ್ಘಾಟಿಸಿದ ರೋಟರಿ ಉಪರಾಜ್ಯಪಾಲ ಅನಿಲ್ ಎಚ್.ಟಿ., ರೋಟರಿ ಸದಸ್ಯರು ವರ್ಷದ ಬಹುತೇಕ ಅವಧಿಯಲ್ಲಿ ವಿವಿಧ ಸಮಾಜಸೇವಾ ಕಾರ್ಯಗಳಲ್ಲಿ ನಿರತರಾಗಿರುತ್ತಾರೆ. ರೋಟರಿ ಸದಸ್ಯರಲ್ಲಿ ಇರುವ ಕಲಾ ಪ್ರತಿಭೆ ಬೆಳಕಿಗೆ ತರುವ ನಿಟ್ಟಿನಲ್ಲಿ ಪ್ರತೀ ವರ್ಷ ವಲಯ ಮತ್ತು ರೋಟರಿ ಜಿಲ್ಲಾ ಮಟ್ಟದಲ್ಲಿ ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸುತ್ತಿದೆ. ಹೀಗಾಗಿ ರೋಟರಿಯಲ್ಲಿರುವ ನೂರಾರು ಸಾಂಸ್ಕೃತಿಕ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.

ಗೋಣಿಕೊಪ್ಪ ರೋಟರಿ ಕ್ಲಬ್ ಅಧ್ಯಕ್ಷೆ ನೀತಾಕಾವೇರಮ್ಮ ಮಾತನಾಡಿ, ಈ ವರ್ಷ ವಲಯ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಲಯ ೬ಕ್ಕೆ ಸೇರಿದ ೭ ಸಂಸ್ಥೆಗಳ ೨೨೦ ಸದಸ್ಯರು, ರೋಟರಿ ಕುಟುಂಬ ಸದಸ್ಯರು ಪಾಲ್ಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು.

ರೋಟರಿ ವಲಯ ಕಾರ್ಯದರ್ಶಿ ಎಚ್.ಎಸ್. ವಸಂತ್ ಕುಮಾರ್, ವಲಯ ಸೇನಾನಿ ಆದಿತ್ಯ, ಜಗದೀಶ್ ಪ್ರಶಾಂತ್, ಸಾಂಸ್ಕೃತಿಕ ಕಾರ್ಯಕ್ರಮಗಳ ವಲಯ ಅಧ್ಯಕ್ಷೆ ಮೃಣಾಲಿನಿ ಚಿಣ್ಣಪ್ಪ, ಗೋಣಿಕೊಪ್ಪ ರೋಟರಿ ಕಾರ್ಯದರ್ಶಿ ಜೆ.ಕೆ. ಸುಭಾಷಿಣಿ ವೇದಿಕೆಯಲ್ಲಿದ್ದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಉಪರಾಜ್ಯಪಾಲ ಅನಿಲ್ ಎಚ್.ಟಿ. ಬಹುಮಾನ ವಿತರಿಸಿದರು. ಗ್ರೀಷ್ಮಾ ಗಣಪತಿ, ಕೆ. ಜಯಲಕ್ಷಿö್ಮ, ಪ್ರೀತ ಕೃಷ್ಣ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು. ಪವಿತ್ರ ನವೀನ್ ಮತ್ತು ಸುಷ್ಮಾ ನಿರೂಪಿಸಿದರು.

ವಿಜೇತರ ವಿವಿರ: ಸಮೂಹ ಗಾಯನ ರೋಟರಿ ಮಿಸ್ಟಿ ಹಿಲ್ಸ್ (ಪ್ರಥಮ), ಶನಿವಾರಸಂತೆ ರೋಟರಿ (ದ್ವಿತೀಯ), ಮಡಿಕೇರಿ ರೋಟರಿ (ತೃತೀಯ). ಸಮೂಹ ನೃತ್ಯ ವೀರಾಜಪೇಟೆ (ಪ್ರಥಮ), ಮಿಸ್ಟಿ ಹಿಲ್ಸ್ (ದ್ವಿತೀಯ), ಗೋಣಿಕೊಪ್ಪ (ತೃತೀಯ). ನಾಟಕ - ಮಿಸ್ಟಿ ಹಿಲ್ಸ್ (ಪ್ರಥಮ) , ವಿರಾಜಪೇಟೆ ರೋಟರಿ (ದ್ವಿತೀಯ), ಗೋಣಿಕೊಪ್ಪ ರೋಟರಿ (ತೃತೀಯ).

ಸೋಲೋ ಹಾಡು (೧೮ ವರ್ಷದೊಳಗಿನ ವಿಭಾಗ) ಶಮಿಕ್ ರೈ ಪ್ರಥಮ (ರೋಟರಿ ಮಿಸ್ಟಿ ಹಿಲ್ಸ್ ), ಭಾಂದವ್ಯ ದ್ವಿತೀಯ (ವೀರಾಜಪೇಟೆ), ಸುಜನ್ ತೃತೀಯ (ಶನಿವಾರಸಂತೆ). ಸೋಲೋ ಹಾಡು (೧೪ ವರ್ಷದೊಳಗಿನ ವಿಭಾಗ) ಇಶಾನಿ ಪ್ರಥಮ (ವೀರಾಜಪೇಟೆ ರೋಟರಿ), ಶರ್ವರಿ ಕಿರಣ್ ರೈ ದ್ವಿತೀಯ (ಮಿಸ್ಟಿ ಹಿಲ್ಸ್), ಮೃದಂಗ್ ತೃತೀಯ (ಹುಣಸೂರು ರೋಟರಿ).

ಸೋಲೋ ಹಾಡು (ಮಹಿಳೆಯರ ವಿಭಾಗ) ನಂದಿನಿ ಪ್ರಥಮ (ಗೋಣಿಕೊಪ್ಪ ರೋಟರಿ), ಮೋಹನ ಕುಮಾರಿ ದ್ವಿತೀಯ (ಹುಣಸೂರು ರೋಟರಿ), ಸುಮನ ಶ್ರೀಹರಿ ತೃತೀಯ (ಮಿಸ್ಟಿ ಹಿಲ್ಸ್). ಸೋಲೋ ಹಾಡು (ಪುರುಷರ ವಿಭಾಗ) ರಾಜೀವ್ ಪ್ರಥಮ (ಗೋಣಿಕೊಪ್ಪ ರೋಟರಿ), ಚನ್ನಕೇಶವ ದ್ವಿತೀಯ (ಹುಣಸೂರು ರೋಟರಿ), ಆದಿತ್ಯ ತೃತೀಯ (ವೀರಾಜಪೇಟೆ ರೋಟರಿ).

ಸೋಲೋ ನೃತ್ಯ (೧೮ ವರ್ಷದೊಳಗಿನವರಿಗೆ) ಅಪೇಕ್ಷಾ ರೈ ಪ್ರಥಮ (ಮಿಸ್ಟಿ ಹಿಲ್ಸ್ ಮಡಿಕೇರಿ), ಮಹಿತ್ ದ್ವಿತೀಯ (ಗೋಣಿಕೊಪ್ಪ ರೋಟರಿ), ಭಾಂದವ್ಯ ತೃತೀಯ (ವೀರಾಜಪೇಟೆ ರೋಟರಿ). ಸೋಲೋ ನೃತ್ಯ (೧೪ ವರ್ಷದೊಳಗಿನವರ ವಿಭಾಗ) ಅನೂಹ್ಯ ರವಿಶಂಕರ್ ಪ್ರಥಮ (ರೋಟರಿ ಮಿಸ್ಟಿ ಹಿಲ್ಸ್), ನವಮಿಕ ದ್ವಿತೀಯ (ಗೋಣಿಕೊಪ್ಪ ರೋಟರಿ), ಮೃದಂಗ್ ತೃತೀಯ (ಹುಣಸೂರು ರೋಟರಿ) ಜೋಡಿ ಗಾಯನ ಸ್ಪರ್ಧೆ: ಉಲ್ಲಾಸ್ ಕೃಷ್ಣ, ರಾಣಿ ಉಲ್ಲಾಸ್ ಪ್ರಥಮ (ಕುಶಾಲನಗರ), ಪ್ರಮೋದ್ ರೈ, ಶಮಿಕ್ ರೈ ದ್ವಿತೀಯ (ಮಿಸ್ಟಿ ಹಿಲ್ಸ್), ರೂಪ, ಜಯಕುಮಾರ್ ತೃತೀಯ (ಶನಿವಾರಸಂತೆ ರೋಟರಿ).